ಬೆಂಗಳೂರು : ಹಗಲಲ್ಲಿ ತಳ್ಳೋ ಗಾಡಿಯಲ್ಲಿ ಬಿರಿಯಾನಿ ಮಾರಾಟ ಮಾಡಿದರೇ ರಾತ್ರಿಯಾದರೆ ಬೈಕ್ ಕಳ್ಳತನ ಮಾಡುತ್ತಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.
ಮನುಕುಮಾರ್, ಸಚಿನ್ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಖತರ್ನಾಕ್ ಕಳ್ಳರು ಅಕ್ಕ-ತಂಗಿಯರನ್ನು ಮದುವೆಯಾಗಿದ್ದರು. ಕಳೆದ ಹತ್ತು ವರ್ಷದಿಂದ ಬಿರಿಯಾನಿ ಮಾರಿಕೊಂಡು, ಕತ್ತಲಾದ್ರೆ ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್, ಡ್ಯೂಕ್ ಬೈಕುಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು.ಹೆಂಡತಿಯರ ಜೊತೆ ಮೋಜು- ಮಸ್ತಿ ಗಾಗಿ ಬೈಕ್ ಕಳ್ಳತನದ ಹಾದಿ ಹಿಡಿದ್ದರು. ಗಂಡಂದಿರು ಕಳ್ಳರು ಅಂತಾ ಗೊತ್ತಿದ್ದರೂ ಸಹ ಹೆಂಡತಿಯರು ಎಂಜಾಯ್ ಮಾಡುತ್ತಿದ್ದರು.
ಸದ್ಯ ಆರೋಪಿಗಳನ್ನು ಬಂಧಿಸಿ 37 ಲಕ್ಷ ಮೌಲ್ಯದ 20 ಬೈಕ್ ಸೀಜ್ ಮಾಡಲಾಗಿದೆ. ಬಂಧಿತರು ಮಹದೇವಪುರ, ಹೆಚ್ ಎಲ್, ವೈಟ್ ಫೀಲ್ಡ್‌ನಲ್ಲಿ ಕಳ್ಳತನದ ಪ್ರಕರಣಗಳು ಪತ್ತೆಯಾಗಿದೆ.
ಇದನ್ನೂ ಓದಿ : Poco F8 ಸರಣಿ ಈ ತಿಂಗಳು ಬಿಡುಗಡೆ : ಭಾರತದಲ್ಲಿ ಯಾವಾಗ ಲಭ್ಯ?


















