ಹಾವೇರಿ: ಪ್ರಸಿದ್ಧ ಮೈಲಾರಲಿಂಗೇಶನ ಕಾರ್ಣಿಕ ಹೊರ ಬಿದ್ದಿದ್ದು, ಈ ಬಾರಿ ರೈತರು ಹಾಗೂ ಜನರು ಸಮೃದ್ಧಿಯಿಂದ ಇರಲಿದ್ದಾರೆ ಎನ್ನಲಾಗುತ್ತಿದೆ.
ಜಿಲ್ಲೆಯ ಹಾನಗಲ್ ತಾಲ್ಲೂಕಿನ ಆಡೂರು ಮೈಲಾರಲಿಂಗೇಶ್ವರನ ಕಾರ್ಣಿಕವನ್ನು ನುಡಿಯಲಾಗಿದೆ. “ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್ ಅನ್ನೋ ದೈವವಾಣಿಯನ್ನು ಗೊರವಯ್ಯ ನುಡಿದಿದ್ದಾರೆ. ಇದರ ಅರ್ಥ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಸಮೃದ್ಧವಾಗಿ ಬೆಳೆಗಳು ಬರಲಿವೆ ಎಂದು ಗ್ರಾಮಸ್ಥರು ವಿಶ್ಲೇಷಣೆ ಮಾಡುತ್ತಿದ್ದಾರೆ.
12 ಅಡಿ ಎತ್ತರದ ಬಿಲ್ಲು ಏರಿ ಈ ವರ್ಷದ ದೈವವಾಣಿಯನ್ನು ಹನುಮನಗೌಡ ಗುರೇಗೌಡರ ಗೊರವಯ್ಯ ನುಡಿದಿದ್ದಾರೆ. ತುಪ್ಪದ ಕೊಡ ಉಕ್ಕೋದು ಅಂದರೆ ಬೆಳೆಗಳು ಮೈದುಂಬಲಿವೆ ಅಂತಾ ಹಾಗೂ ನೀರಿನ ಕೊಡ ಉರಡೋದು ಅಂದರೆ ಮಳೆಯಾಗುವುದು, ಸುಖ, ಶಾಂತಿ, ಸಮೃದ್ಧಿ ತುಂಬಿ ತುಳುಕುವುದು ಎಂದು ಅರ್ಥೈಸಲಾಗಿದೆ.