ಬೆಂಗಳೂರು: ಆಗ್ನೇಯ ಕೇಂದ್ರೀಯ ರೈಲ್ವೆ ವಿಭಾಗದಲ್ಲಿ (SECR Recruitment 2025) 1,007 ಅಪ್ರೆಂಟಿಸ್ ಹುದ್ದೆಗಳಿಗೆ ರೈಲ್ವೆ ಇಲಾಖೆಯು ಅರ್ಜಿ ಆಹ್ವಾನಿಸಿದೆ. ಎಸ್ ಎಸ್ ಎಲ್ ಸಿ, ಐಟಿಐ ಮುಗಿಸಿದ ಅಭ್ಯರ್ಥಿಗಳು ಮೇ 2ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬಯಸುವವರು apprenticeshipindia.gov.in ವೆಬ್ ಪೋರ್ಟಲ್ ಗೆ ಭೇಟಿ ನೀಡಬಹುದಾಗಿದೆ.
ಯಾವ ಹುದ್ದೆಗಳು ಎಷ್ಟು ಖಾಲಿ?
ಫಿಟ್ಟರ್ 66, ಕಾರ್ಪೆಂಟರ್ 39, ವೆಲ್ಡರ್ 17, ಕೋಪಾ 170, ಎಲೆಕ್ಟ್ರಿಶಿಯನ್ 253, ಸ್ಟೆನೊಗ್ರಾಫರ್ 20, ಪ್ಲಂಬರ್ 36, ಪೇಂಟರ್ 52, ವೈರ್ ಮ್ಯಾನ್ 42, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ 12, ಡೀಸೆಲ್ ಮೆಕ್ಯಾನಿಕ್ 110, ಮಷಿನಿಸ್ಟ್ 5, ಟರ್ನರ್ 7 ಹೀಗೆ ಹಲವು ವಿಭಾಗಗಳಲ್ಲಿ ಹುದ್ದೆಗಳು ಖಾಲಿ ಇವೆ. ನಾಗ್ಪುರ ಡಿವಿಷನ್ ನಲ್ಲಿ 919 ಹುದ್ದೆಗಳು ಖಾಲಿ ಇದ್ದರೆ, ಮೋತಿಬಾಗ್ ವರ್ಕ್ ಶಾಪ್ ನಲ್ಲಿ 88 ಹುದ್ದೆಗಳು ಖಾಲಿ ಇವೆ.
ಸ್ಟೈಪೆಂಡ್ ಎಷ್ಟು?
ಎಸ್ ಎಸ್ ಎಲ್ ಸಿ ಜತೆಗೆ ಎರಡು ವರ್ಷಗಳ ಐಟಿಐ ಕೋರ್ಸ್ ಮುಗಿಸಿದವರಿಗೆ ಮಾಸಿಕ 8,050 ರೂಪಾಯಿ ಸ್ಟೈಪೆಂಡ್ ನೀಡಲಾಗುತ್ತದೆ. ಎಸ್ ಎಸ್ ಎಲ್ ಸಿ ಜತೆಗೆ ಒಂದು ವರ್ಷದ ಐಟಿಐ ಕೋರ್ಸ್ ಮುಗಿಸಿದವರಿಗೆ ಮಾಸಿಕ 7,700 ರೂಪಾಯಿ ಸ್ಟೈಪೆಂಡ್ ನೀಡಲಾಗುತ್ತದೆ. ಎರಡು ವರ್ಷಗಳವರೆಗೆ ಅಭ್ಯರ್ಥಿಗಳಿಗೆ ಟ್ರೈನಿಂಗ್ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿದ ಬಳಿಕ ರೈಲ್ವೆ ಇಲಾಖೆಯು ಶಾರ್ಟ್ ಲಿಸ್ಟ್ ಮಾಡುತ್ತದೆ. ಎಸ್ ಎಸ್ ಎಲ್ ಸಿ ಹಾಗೂ ಐಟಿಐನಲ್ಲಿ ಪಡೆದ ಅಂಕಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಜನರಲ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಮಾಜಿ ಸೈನಿಕರಿಗೆ ಹತ್ತು ವರ್ಷ ವಯಸ್ಸಿನ ಸಡಿಲಿಕೆ ಇದೆ.