ಬೆಂಗಳೂರು : ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು (ಏಪ್ರಿಲ್ 9 ಗುರುವಾರ) ಮಧ್ಯಾಹ್ನ 3 ಗಂಟೆಗೆ ಆನ್ಲೈನ್ನಲ್ಲಿ ಪ್ರಕಟಗೊಂಡಿದ್ದು, ಬಳಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶದ ಕುರಿತು ಮಾಹಿತಿ ನೀಡಿದ್ದಾರೆ.
ಈ ಬಾರಿ ದಾಖಲೆಯ ರಿಸಲ್ಟ್ ಬಂದಿದೆ. 2025-26ನೇ ಸಾಲಿನ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಶೇ.86.48ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ.
ಯಾವ ಜಿಲ್ಲೆ ಎಷ್ಟನೇ ಸ್ಥಾನ?
ಕಳೆದ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಯಾದಗಿರಿ ಕೊನೆ ಸ್ಥಾನದಲ್ಲಿತ್ತು. ಈ ಬಾರಿಯೂ ಸಹ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ, ಯಾದಗಿರಿ ಕೊನೇ ಸ್ಥಾನದಲ್ಲಿದೆ. ಶೇಕಡಾ 9,639 ಫಲಿತಾಂಶ ಪಡೆದು ಉಡುಪಿ ಜಿಲ್ಲೆ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉತ್ತರ ಕನ್ನಡ ಜಿಲ್ಲೆ ಶೇಕಡಾ 96.35 ಫಲಿತಾಂಶದ ಮೂಲಕ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ಇನ್ನು ಹಾಸನ ಯಾದಗಿರಿ ಜಿಲ್ಲೆ ಶೇಕಡಾ 71.21 ಫಲಿತಾಂಶದ ಮೂಲಕ ರಾಜ್ಯಕ್ಕೆ ಕೊನೆಯ ಸ್ಥಾನದಲ್ಲಿದೆ.

ಜಿಲ್ಲಾವಾರು ಫಲಿತಾಂಶ ಹೀಗಿದೆ
- ಉಡುಪಿ – 96.39%
- ದಕ್ಷಿಣ ಕನ್ನಡ – 96.35%
- ಕೊಡಗು – 92.34%
- ವಿಜಯಪುರ – 92%
- ಉತ್ತರ ಕನ್ನಡ – 91.78%
- ಬೆಂಗಳೂರು ಗ್ರಾಮಾಂತರ – 91.00%
- ಚಿಕ್ಕಮಗಳೂರು – 90.80%
- ಬೆಂಗಳೂರು ದಕ್ಷಿಣ – 90.55%
- ಚಿಕ್ಕಬಳ್ಳಾಪುರ – 90.24%
- ಬೆಂಗಳೂರು ಉತ್ತರ – 90.05%
- ಹಾಸನ – 89.71%
- ಮಂಡ್ಯ – 88.85%
- ರಾಮನಗರ – 87.90%
- ಕೋಲಾರ – 87.38%
- ಶಿವಮೊಗ್ಗ – 87.62%
- ತುಮಕೂರು – 86.89%
- ಕೊಪ್ಪಳ – 86.80%
- ಚಾಮರಾಜನಗರ – 84.68%
- ಮೈಸೂರು – 84.80%
- ಬೀದರ್ – 84.61%
- ಬಾಗಲಕೋಟೆ – 84.12%
- ಹಾವೇರಿ – 84.11%
- ಧಾರವಾಡ – 83.31%
- ಚಿಕ್ಕೋಡಿ – 83.10%
- ದಾವಣಗೆರೆ – 81.99%
- ಬೆಳಗಾವಿ – 80.32%
- ಚಿತ್ರದುರ್ಗ – 79.12%
- ಬಳ್ಳಾರಿ – 78.69%
- ಕಲಬುರಗಿ – 76.97%
- ಗದಗ – 76.65%
- ರಾಯಚೂರು – 74.09%
- ಯಾದಗಿರಿ – 71.21%
ಇದನ್ನೂ ಓದಿ : IPLನಲ್ಲಿ ಬಿಸಿಸಿಐ ‘ಮಾಸ್ಟರ್ ಪ್ಲಾನ್’ – ಬೆಂಚ್ ಆಟಗಾರರಿಗೆ ಹೊಸ ನಿರ್ಬಂಧ.. ಶಿಸ್ತಿನ ಆಟಕ್ಕೆ ಬಿಗಿ ನಿಯಮ!



















