ಬೆಂಗಳೂರು: ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷಾ ಮಂಡಳಿ ಸಕಲ ರೀತಿಯಲ್ಲಿ ತಯಾರಿ ಮಾಡಿಕೊಂಡಿದೆ.
ಮಾರ್ಚ್ 1ರಿಂದ ಮಾರ್ಚ್ 20ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಈ ಬಾರಿ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳು-335468, ವಿದ್ಯಾರ್ಥಿನಿಯರು- 378389 ಸೇರಿದಂತೆ ತೃತೀಯ ಲಿಂಗಿಗಳು- 5 ನೊಂದಣಿ ಮಾಡಿಕೊಂಡಿದ್ದಾರೆ.
ಈ ಪೈಕಿ ಹೊಸಬರು- 6,61,474, ಪುನರಾವರ್ತಿತ 34,071, ಖಾಸಗಿ ವಿದ್ಯಾರ್ಥಿಗಳು- 18317 ನೊಂದಣಿ ಮಾಡಿಕೊಂಡಿದ್ದಾರೆ. 5050 ಕಾಲೇಜುಗಳು ಪರೀಕ್ಷೆ ನೊಂದಣಿ ಮಾಡಿಕೊಂಡಿವೆ. ಪರೀಕ್ಷಾ ಕೇಂದ್ರಗಳ ಸಂಖ್ಯೆ-1171, ಸ್ಥಾನಿಕ ಜಾಗೃತ ದಳ ಸಂಖ್ಯೆ-2342, ವಿಚಕ್ಷಣ ಜಾಗೃತ ದಳ-504 ಇವೆ. ಪರೀಕ್ಷೆಯ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಕರ್ನಾಟಕ ನ್ಯೂಸ್ ಬೀಟ್ ಹಾರೈಸುತ್ತಿದೆ.