ʼಉಡುಪಿ: ನಿಯಂತ್ರಣ ತಪ್ಪಿದ ರಸ್ತೆ ಬದಿಯ ಕಂಪೌಂಡಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಸಾವನ್ನಪ್ಪಿದ್ದು, ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ನಿಟ್ಟೂರು ಸಮೀಪ ನಡೆದಿದ್ದು, ಅಪಘಾತದ ಸಿಸಿಟಿವಿ ಪೂಟೇಜ್ ಲಭ್ಯವಾಗಿದೆ.
ಕಟಪಾಡಿ ಮೂಲದ ಹೆಲೆನ್ ಸೋನ್ಸ್ (50) ಮೃತ ಮಹಿಳೆ. ಸ್ಕೂಟರ್ ಚಲಾಯಿಸುತ್ತಿದ್ದ ಪುತ್ರ ಶೆರ್ವಿನ್‌ಗೆ ಗಂಭೀರ ಗಾಯವಾಗಿದ್ದು, ಸದ್ಯ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ಸ್ಕೂಟರ್ ಹಿಂಬದಿ ಕುಳಿತಿದ್ದ ಹೆಲೆನ್ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿಈ ನಡೆದ ಅಪಘಾತ ನಡೆದಿದೆ.
ಇದನ್ನೂ ಓದಿ : ಸ್ವಿಮಿಂಗ್ ಫೂಲ್‌ನಲ್ಲಿ ನೀರು ಕುಡಿದು ನಟನ ಮನೆಯ ಸುತ್ತ ಬಂದಾಸ್ ರೌಂಡ್ಸ್ ಹಾಕಿದ ಒಂಟಿ ಸಲಗ



















