ಬೆಂಗಳೂರು: ಯುಜ್ವೇಂದ್ರ ಚಹಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಅವರು ಸೋಮವಾರ, ಮಾರ್ಚ್ 10ರಂದು ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಮಹಿಳೆಯರನ್ನು ದೂಷಿಸುವುದು ಯಾವಾಗಲೂ ಫ್ಯಾಷನ್” ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ವೇಳೆ, ಚಹಲ್ ಆರ್ಜೆ ಮಹ್ವಾಶ್ ಎಂಬ ಯುವತಿಯೊಂದಿಗೆ ಕಂಡು ಬಂದ ಬಳಿಕ ಅವರು ಪೋಸ್ಟ್ ಹಂಚಿಕೊಂಡು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
ಸ್ಪಿನ್ ಬೌಲರ್ ಯುಜ್ವೇಂದ್ರ ಚಹಲ್ ಅವರೊಂದಿಗೆ ವಿಚ್ಛೇದನ ಪಡೆದಿದ್ದಾರೆ ಎಂಬ ವಕೀಲರು ದೃಢೀಕರಣ ಕೊಟ್ಟ ನಂತರ ಸೋಶಿಯಲ್ ಮೀಡಿಯಾದಲ್ಲಿ ಧನಶ್ರೀ ಅವರನ್ನು ಟ್ರೋಲ್ ಮಾಡಲಾಗಿತ್ತು. ಚಹಲ್ ಮತ್ತು ಅವರ ಕುಟುಂಬದಿಂದ ಧನಶ್ರೀ ಅವರು ಹಣಕ್ಕೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿತ್ತು.ಅಲ್ಲದೆ, ಸೋಶಿಯಲ್ ಮೀಡಿಯಾಗಳಲ್ಲಿ ಧನಶ್ರೀ ಬಗ್ಗೆ ನಾನಾ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ.
ಭಾನುವಾರ, ಚಹಲ್ ಅವರು ಆರ್ಜಿಎ ಮಹ್ವಾಶ್ ಅವರೊಂದಿಗೆ ಕುಳಿತು, ಪ್ರೀಮಿಯಂ ಸ್ಟ್ಯಾಂಡ್‌ನಿಂದ ಪಂದ್ಯವನ್ನು ನೋಡುತ್ತಿರುವುದು ವೀಡಿಯೊದಲ್ಲಿ ಕಾಣಿಸಿಕೊಂಡಿತ್ತು. ಬ್ಲ್ಯಾಕ್ ಹೂಡಿ, ಬ್ಲ್ಯಾಕ್ ಟಿ-ಶರ್ಟ್ ಮತ್ತು ಸಿಲ್ವರ್ ನೆಕ್ಲೇಸ್ ಧರಿಸಿದ್ದ ಲೆಗ್-ಸ್ಪಿನ್ನರ್ ಚಹಲ್ ಅವರು ಖುಷಿಯಲ್ಲಿದ್ದರು.
ಧನಶ್ರೀ ವಕೀಲರು ಹೇಳಿದ್ದೇನು?
ಇತ್ತೀಚೆಗೆ, ಧನಶ್ರೀ ಅವರ ವಕೀಲ ಅಡ್ವೊಕೇಟ್ ಅದಿತಿ ಮೊಹನಿ ಅವರು ಇಂಡಿಯಾ ಟುಡೇಗೆ ವಿಚ್ಛೇದನದ ವಿಷಯ ನ್ಯಾಯಾಲಯ ತಲುಪಿದೆ ಎಂದು ತಿಳಿಸಿದ್ದರು. “ನಾನು ಈ ಪ್ರಕ್ರಿಯೆಗಳ ಕುರಿತು ಯಾವುದೇ ಕಾಮೆಂಟ್ ಮಾಡಲು ಬಯಸುವುದಿಲ್ಲ, ಈ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿದೆ. ಮಾಧ್ಯಮಗಳು ವರದಿ ಮಾಡುವ ಮೊದಲು ಸತ್ಯಾಂಶಗಳನ್ನು ಪರಿಶೀಲಿಸಬೇಕು, ಏಕೆಂದರೆ ಸಾಕಷ್ಟು ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ,” ಎಂದು ಅವರು ಹೇಳಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಹೇಳಿಕೆಗಳು ವೈರಲ್ ಆಗಿವೆ. ಅವುಗಳಲ್ಲಿ ಒಂದು ವರದಿಯ ಪ್ರಕಾರ, ಧನಶ್ರೀ ಅವರು ವಿಚ್ಛೇದನದ ನಂತರ 60 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಧನಶ್ರೀ ಅವರ ಕುಟುಂಬವು ಇಂತಹ ಯಾವುದೇ ಬೇಡಿಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ..
“ಮೊತ್ತದ ಕುರಿತು ಹರಡುತ್ತಿರುವ ನಿರಾಧಾರಿತ ಹೇಳಿಕೆಗಳ ಬಗ್ಗೆ ನಾವು ತೀವ್ರ ಅಸಮಾಧಾನ ಹೊಂದಿದ್ದೇವೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ, ಇಂತಹ ಯಾವುದೇ ಮೊತ್ತವನ್ನು ಕೇಳಿಲ್ಲ, ಬೇಡಿಕೆ ಸಲ್ಲಿಸಿಲ್ಲ, ಅಥವಾ ನೀಡಲೂ ಇಲ್ಲ. ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಇಂತಹ ಆಧಾರ ರಹಿತ ಮಾಹಿತಿಯನ್ನು ಪ್ರಕಟಿಸುವುದು ಬೇಜವಾಬ್ದಾರಿ ವರ್ತನೆಯಾಗಿದೆ. ಇದು ಪಕ್ಷಗಳು ಮತ್ತು ಅವರ ಕುಟುಂಬಗಳನ್ನು ಅನಗತ್ಯ ಊಹಾಪೋಹಗಳಿಗೆ ಈಡುಮಾಡುತ್ತದೆ. ಇಂತಹ ಅವಿವೇಕದ ವರದಿಗಳು
ಹಾನಿಯನ್ನುಂಟುಮಾಡುತ್ತವೆ.,” ಎಂದು ಧನಶ್ರೀ ಅವರ ಕುಟುಂಬದ ಸದಸ್ಯರು ಹೇಳಿದ್ದರು.
ಚಹಲ್ ಮತ್ತು ಧನಶ್ರೀ ಅವರು 2020ರಲ್ಲಿ ವಿವಾಹವಾಗಿದ್ದರು. ಮೋಜಿನ ವಿಡಿಯೊಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ತಮ್ಮ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದರು.