ಗದಗ: ಉದ್ದ ಕೂದಲು ಬಿಟ್ಟುಕೊಂಡು ಬಂದಿದ್ದಾರೆಂಬ ಕಾರಣಕ್ಕೆ ವಿದ್ಯಾರ್ಥಿಗಳ ಕೂದಲು ಕಟ್ ಮಾಡಿದ್ದ ಶಿಕ್ಷಕನಿಗೆ ಪೋಷಕರು ಧರ್ಮದೇಟು ನೀಡಿರುವ ಘಟನೆ ನಡೆದಿದೆ.
ಗದಗ-ಬೆಟಗೇರಿಯ ಸೆಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ(School) ಯಲ್ಲಿ ಈ ಘಟನೆ ನಡೆದಿದೆ. ಆರೇಳು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಕೂದಲು ಬಿಟ್ಟಿಕೊಂಡು ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಕಂಪ್ಯೂಟರ್ ಶಿಕ್ಷಕ ಬೆನೋಯ್ ಕೂದಲು ಕತ್ತರಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಯ ಹಣೆಗೆ ಗಾಯವಾಗಿದೆ. ಈ ವಿಷಯ ಪೋಷಕರಿಗೆ ಗೊತ್ತಾಗಿದೆ. ಕೂಡಲೇ ಪೋಷಕರು ಶಾಲೆಗೆ ಬಂದು ಪ್ರಶ್ನಿಸಿದ್ದಾನೆ. ಈ ವೇಳೆ ಶಿಕ್ಷಕ ಮೊಂಡು ವಾದ ಮಾಡಿದ್ದಾನೆ. ಆಗ ನೀನೆ ಸರಿಯಾಗಿ ಕಟಿಂಗ್ ಮಾಡಿಸಿಕೊಂಡಿಲ್ಲ. ಮೊದಲು ಸರಿಯಾಗಿ ಕಟಿಂಗ್ ಮಾಡಿಸು ಎಂದು ಧರ್ಮದೇಟು ನೀಡಿದ್ದಾರೆ.
ಶ್ರಾವಣ ಮಾಸದಲ್ಲಿ ಹೆಚ್ಚಿನ ಮಕ್ಕಳು ಕಟಿಂಗ್ ಮಾಡಿಸುವುದಿಲ್ಲ. ಅದನ್ನು ಪೋಷಕರ ಗಮನಕ್ಕೆ ತಂದು ಕಟಿಂಗ್ ಮಾಡಿಸಲು ಹೇಳಬೇಕು. ಅದನ್ನು ಬಿಟ್ಟು ಇವರೇ ಕಟಿಂಗ್ ಮಾಡಿದ್ರೆ ಹೇಗೆ? ಎಂದು ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ ಶಾಲೆಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇನ್ನೊಂದೆಡೆ ಈ ಶಿಕ್ಷಕನನ್ನು ಶಾಲೆಯಿಂದ ಹೊರ ಹಾಕಬೇಕೆಂದು ಪಟ್ಟು ಹಿಡಿದಿದ್ದರು.
ಶಿಕ್ಷನಿಗೆ ಧರ್ಮದೇಟು ಬೀಳುತ್ತಿದ್ದಂತೆ ಶಾಲೆಗೆ ಆಗಮಿಸಿದ ಪೊಲೀಸರು ಕೂದಲು ಕಟ್ ಮಾಡಿದ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ.