ಬೆಂಗಳೂರು: ಮನೆಗೆ ವಂಶೋದ್ಧಾರಕನೋ, ಮಹಾಲಕ್ಷ್ಮೀಯ ಆಗಮನವಾಗಿರುತ್ತದೆ. ಮಗ ಅಥವಾ ಮಗಳು 20 ವರ್ಷ ತುಂಬುವಷ್ಟರಲ್ಲೇ ಅವರನ್ನು ಕೋಟ್ಯಧೀಶರನ್ನಾಗಿ ಮಾಡಬೇಕು ಎಂಬ ಉದ್ದೇಶ ನಿಮಗಿದ್ದರೆ, ನಿಮಗಿಲ್ಲಿ ಹೂಡಿಕೆಯ ಕುರಿತು ಮಾಹಿತಿ ನೀಡಲಾಗಿದೆ. ಮಕ್ಕಳ ಉನ್ನತ ಶಿಕ್ಷಣ, ಉದ್ಯಮ, ಮದುವೆ ಸೇರಿ ಯಾವುದೇ ಕಾರಣಕ್ಕಾದರೂ ಹಣವನ್ನು ಬಳಸಬಹುದಾಗಿದೆ.
ಹೌದು, ಎಸ್ ಬಿ ಐ ಮ್ಯಾಗ್ನಮ್ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ನಲ್ಲಿ ತಿಂಗಳಿಗೆ 2 ಸಾವಿರ ರೂ. ಹೂಡಿಕೆ ಮಾಡಿದರೂ, 20 ವರ್ಷದಲ್ಲಿ ಶೇ.37ರ ರಿಟರ್ನ್ಸ್ ಲೆಕ್ಕಾಚಾರದಲ್ಲಿ 3 ಕೋಟಿ ರೂ. ಲಭಿಸುತ್ತದೆ. ಎಸ್ ಬಿ ಐ ಮ್ಯಾಗ್ನಮ್ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ಎಂಬುದು ಎಸ್ಐಪಿಯಾಗಿದ್ದು, ಕಳೆದ 5 ವರ್ಷದಲ್ಲಿ ಶೇ.40ರಷ್ಟು ರಿಟರ್ನ್ಸ್ ನೀಡಿದೆ. ಫಂಡ್ ಆರಂಭವಾದಾಗಿನಿಂದ ಇದುವರೆಗೆ ಹೂಡಿಕೆದಾರರಿಗೆ ಹೆಚ್ಚಿನ ರಿಟರ್ನ್ಸ್ ನೀಡಿದೆ.
ವರ್ಷಕ್ಕೆ 2 ಸಾವಿರ ರೂಪಾಯಿಯಂತೆ 20 ವರ್ಷ ಹೂಡಿಕೆ ಮಾಡಿದರೆ, ನೀವು ಹೂಡಿಕೆ ಮಾಡಿದ ಮೊತ್ತವು 4.8 ಲಕ್ಷ ರೂ. ಆಗುತ್ತದೆ. ಅದಕ್ಕೆ, ಕನಿಷ್ಠ ಶೇ.37ರಷ್ಟು ರಿಟರ್ನ್ಸ್ ಎಂದರೂ 3 ಕೋಟಿ ರೂ. ಲಭಿಸುತ್ತದೆ. ಕಳೆದ ಐದು ವರ್ಷಗಳಲ್ಲಿ ಶೇ.40ರಷ್ಟು ರಿಟರ್ನ್ಸ್ ನೀಡಿರುವ ಕಾರಣ ಹೆಚ್ಚಿನ ಜನ ಎಸ್ ಬಿ ಐ ಮ್ಯಾಗ್ನಮ್ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗಮನಿಸಿ: ಎಸ್ ಬಿ ಐ ಮ್ಯಾಗ್ನಮ್ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ಬಗ್ಗೆ ಮಾಹಿತಿ ನೀಡಲು ಈ ಸ್ಟೋರಿಯನ್ನು ಪಬ್ಲಿಶ್ ಮಾಡಲಾಗಿದೆ. ಇದು ಹೂಡಿಕೆಯ ಕುರಿತು ಶಿಫಾರಸು ಅಲ್ಲ. ಯಾವುದೇ ರೀತಿಯ ಹೂಡಿಕೆಗೂ ಮುನ್ನ ತಜ್ಞರ ಸಲಹೆಗಳನ್ನು ಪಡೆಯುವುದು ಮರೆಯದಿರಿ. ಮಾಹಿತಿ ನೀಡುವುದು ಅಷ್ಟೇ ನಮ್ಮ ಲೇಖನದ ಉದ್ದೇಶ.