ನವದೆಹಲಿ: ಗೃಹ ಸಾಲ, ವಾಹನ ಸಾಲ ಸೇರಿ ಹಲವು ರೀತಿಯಲ್ಲಿಸಾಲ ಮಾಡಿದವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಗುಡ್ ನ್ಯೂಸ್ ನೀಡಿದೆ. ಸಾಲದ ಮೇಲಿನ ಬಡ್ಡಿದರವನ್ನು (SBI Interest Rate) ಎಸ್ ಬಿಐ ಶೇ.0.25ರಷ್ಟು ಇಳಿಕೆ ಮಾಡಿದ್ದು, ಸಾಲಗಾರರ ಮಾಸಿಕ ಇಎಂಐ ಹೊರೆ ಕಡಿಮೆಯಾಗಲಿದೆ. ಆರ್ ಬಿಐ ಕಳೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿರೆಪೊ ದರದಲ್ಲಿ25 (ಶೇ.0.25) ಬೇಸಿಸ್ ಪಾಯಿಂಟ್ ಗಳನ್ನು ಇಳಿಸಿದ ಕಾರಣ ಎಸ್ ಬಿಐ ಕೂಡ ಬಡ್ಡಿದರ ಇಳಿಸಿದೆ.
ಗೃಹ ಸಾಲ, ವಾಹನ ಸಾಲ ಸೇರಿ ಹಲವು ರೀತಿಯ ವೈಯಕ್ತಿಕ ಸಾಲಗಳಿಗೆ ಇದುವರೆಗೆ ಎಸ್ ಬಿಐ ಶೇ.9.15ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು. ಈಗ ಶೇ.8.90ರಷ್ಟು ವಿಧಿಸಲಾಗುತ್ತದೆ. ಇದರ ಜತೆಗೆ ರೆಪೊ ಆಧಾರಿತವಾಗಿ ನೀಡುವ ಸಾಲದ ಮೇಲಿನ ಬಡ್ಡಿಯನ್ನೂ ಶೇ.8.75ರಿಂದ ಶೇ.8.50ಕ್ಕೆ ಇಳಿಕೆ ಮಾಡಲಾಗಿದೆ. ಹಾಗಾಗಿ, ಹೊಸದಾಗಿ ಸಾಲ ಪಡೆಯುವವರಿಗೂ ಇಎಂಐ ಹೊರೆ ಕಡಿಮೆಯಾಗಲಿದೆ.
2023ರ ಫೆಬ್ರವರಿಯಿಂದಲೂ ಆರ್ ಬಿಐ ರೆಪೊ ದರದಲ್ಲಿಯಥಾಸ್ಥಿತಿ ಕಾಪಾಡಿಕೊಂಡು ಬಂದಿತ್ತು. ಹಣದುಬ್ಬರ, ಜಿಡಿಪಿ ಲೆಕ್ಕಾಚಾರದ ಹಿನ್ನೆಲೆಯಲ್ಲಿಯಥಾಸ್ಥಿತಿ ಮುಂದುವರಿಸಿತ್ತು. ಆದರೆ, ಕಳೆದ ಎಂಪಿಸಿ ಸಭೆಯಲ್ಲಿರೆಪೊ ದರವನ್ನು ಶೇ.6.5ರಿಂದ ಶೇ.6.25ಕ್ಕೆ ಇಳಿಕೆ ಮಾಡಿದೆ. ಇದರಿಂದಾಗಿ ಎಸ್ ಬಿಐ ಈಗ ಬಡ್ಡಿದರ ಕಡಿತಗೊಳಿಸಿದೆ. ಹಲವು ಬ್ಯಾಂಕ್ ಗಳು ಕೂಡ ಇಳಿಕೆ ಮಾಡಲಿವೆ ಎಂದು ತಿಳಿದುಬಂದಿದೆ.