ಮಂಗಳೂರು : ನಾಡಹಬ್ಬ ಮೈಸೂರು ದಸರಾ ಉತ್ಸವದ ಅಂಗವಾಗಿ ಕರುನಾಡ ಕಲ್ಪತರು ರಾಜ್ಯ ಪ್ರಶಸ್ತಿ ವಿಜೇತ ಸಂದೀಪ್ ದೇವಾಡಿಗ ಅರಿಯಡ್ಕ ಇವರ ತಂಡವು ಸ್ಯಾಕ್ಸೋಫೋನ್ ಕಛೇರಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುತ್ತದೆ.
ನಾಡಹಬ್ಬದ ವಿಶೇಷ ಕಾರ್ಯಕ್ರಮವಾಗಿ ಸೆಪ್ಟೆಂಬರ್ 30, 2025ರಂದು ಸಂಜೆ 5ಗಂಟೆಗೆ ಮೈಸೂರು ಕಲಾ ಮಂದಿರದಲ್ಲಿ ಸ್ಯಾಕ್ಸೋಫೋನ್ ಕಛೇರಿ ಜರುಗಲಿದೆ.
ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ನಿವಾಸಿ ಸಂದೀಪ್ ದೇವಾಡಿಗ ಈಗಾಗಲೇ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ನೀಡಿದ್ದು ,ಸಂಗೀತ ಪ್ರೀಯರಿಂದ ಅಪಾರ ಪ್ರೀತಿ, ಮೆಚ್ಚುಗೆಯನ್ನು ಪಡೆದಿದ್ದಾರೆ.



















