ನಮ್ಗೆ ಷೇರು ಮಾರುಕಟ್ಟೆ ತಂಟೆಯೇ ಬೇಡ. ಮ್ಯೂಚುವಲ್ ಫಂಡ್, ಎಸ್ಐಪಿಯ ರಿಸ್ಕ್ ಕೂಡ ಬೇಡ. ಯಾವ್ದೇ ರಿಸ್ಕ್ ಇಲ್ಲದೆ ನಾವು ಕೂಡಿಡುವ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಬರಬೇಕು. ಹಾಗಿದ್ರೆ ಮಾತ್ರ ನಾವು ಹೂಡಿಕೆ ಮಾಡ್ತೀವಿ ಅನ್ನೋರ ಸಂಖ್ಯೆ ಹೆಚ್ಚಿದೆ. ಆದ್ರೆ, ಯಾವ ಯೋಜನೆ ಸುರಕ್ಷಿತ? ಯಾವುದರಲ್ಲಿ ಹೂಡಿಕೆ ಮಾಡಿದ್ರೆ ರಿಸ್ಕ್ ಇಲ್ಲದೆ ಹೆಚ್ಚಿನ ರಿಟರ್ನ್ಸ್ ಪಡೆಯಬಹುದು ಅನ್ನೋ ಮಾಹಿತಿ ಇರೋದಿಲ್ಲ. ಅವರಿಗೆಂದೇ, ರಿಸ್ಕ್ ಇಲ್ಲದ, ಕೇಂದ್ರ ಸರ್ಕಾರದ ಗ್ಯಾರಂಟಿ ಇರೋ ಯೋಜನೆ ಬಗ್ಗೆ ನಾವ್ ನಿಮ್ಗೆ ಮಾಹಿತಿ ಕೊಡ್ತೀವಿ ನೋಡಿ.
ರಿಸ್ಕ್ ಇಲ್ಲವೇ ಇಲ್ಲ, ಒಳ್ಳೇ ರಿಟರ್ನ್ಸ್ ನಿಶ್ಚಿತ
ಕೇಂದ್ರ ಸರ್ಕಾರವೇ ಹೂಡಿಕೆ ಹಣಕ್ಕೆ ಗ್ಯಾರಂಟಿ
ಇಲ್ಲಿದೆ ನೋಡಿ ಪಿಪಿಎಫ್ ಕುರಿತ ಕಂಪ್ಲೀಟ್ ಡಿಟೇಲ್ಸ್
ಹೌದು, ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಉಳಿತಾಯ ಯೋಜನೆಯು ಹೆಚ್ಚು ಖ್ಯಾತಿ ಪಡೆದಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಪೋ್ಟ್ ಆಫೀಸ್ ನಲ್ಲಿ ಖಾತೆ ತೆರೆದು ನಿಯಮಿತವಾಗಿ ಹೂಡಿಕೆ ಮಾಡಬಹುದಾಗಿದೆ. ದೀರ್ಘಾವಧಿ ಹೂಡಿಕೆಯ ದೃಷ್ಟಿಯಿಂದ ಇದು ಅತ್ಯುತ್ತಮ ಯೋಜನೆಯಾಗಿದೆ. ರಿಸ್ಕ್ ಕೂಡ ಇಲ್ಲದಿರುವ ಕಾರಣ ಯಾರು ಬೇಕಾದರೂ ಕಣ್ಣುಮುಚ್ಚಿಕೊಂಡು ಹೂಡಿಕೆ ಮಾಡಬಹುದಾಗಿದೆ.
ಪಿಪಿಎಫ್ ಯೋಜನೆಗೆ ವರ್ಷಕ್ಕೆ 7.1% ಬಡ್ಡಿ
ತಿಂಗಳಿಗೆ 8 ಸಾವಿರ ಉಳಿಸಿ, 26 ಲಕ್ಷ ರೂ. ಗಳಿಸಿ
ನಿಯಮಿತ ಹೂಡಿಕೆಯೇ ಇದರ ಸಕ್ಸೆಸ್
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ವರ್ಷಕ್ಕೆ ಶೇಕಡಾ 7.1 ರಷ್ಟು ಬಡ್ಡಿದರವನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ, ನೀವು ವಾರ್ಷಿಕವಾಗಿ ಕನಿಷ್ಠ 500 ರೂ.ಗಳಿಂದ ಗರಿಷ್ಠ 1.5 ಲಕ್ಷ ರೂ.ಗಳವರೆಗೆ ಹೂಡಿಕೆ ಮಾಡಬಹುದು. ಅದರಂತೆ, ನೀವು ಮಾಸಿಕ 8 ಸಾವಿರ ರೂ.ನಂತೆ 15 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಶೇ.7.1ರಷ್ಟು ಬಡ್ಡಿದರದೊಂದಿಗೆ ನಿಮಗೆ 26 ಲಕ್ಷ ರೂ. ಸಿಗತ್ತೆ.
ನೀವು ಪ್ರತಿ ತಿಂಗಳು 8 ಸಾವಿರ ರೂಪಾಯಿ ಉಳಿಸಿದರೆ, ಅದು ವರ್ಷಕ್ಕೆ 96 ಸಾವಿರ ರೂಪಾಯಿ ಆಗತ್ತೆ. ಒಟ್ಟು 15 ವರ್ಷ ನೀವು ಪ್ರತಿ ವರ್ಷ 96 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. 15 ವರ್ಷಗಳ ಬಳಿಕ ನೀವು ಹೂಡಿಕೆ ಮಾಡಿದ ಮೊತ್ತವು 14.4 ಲಕ್ಷ ರೂ. ಆಗತ್ತೆ, ಇದಕ್ಕೆ ಶೇ.7.1ರಷ್ಟು ಬಡ್ಡಿ ಸೇರಿ ಒಟ್ಟು 26,03,654 ರೂ. ಸಿಗುತ್ತದೆ.
15 ವರ್ಷಕ್ಕೇ ಸೀಮಿತವಲ್ಲ ಹೂಡಿಕೆ
ಇದರ ಬಳಿಕವೂ ವಿಸ್ತರಣೆ ಸಾಧ್ಯ
ಚಕ್ರಬಡ್ಡಿಯ ಲಾಭ ಸಿಗೋದು ಇಲ್ಲೇ
ಪಿಪಿಎಫ್ ಹೂಡಿಕೆಯು ಸುದೀರ್ಘ ಅವಧಿಯ ಹೂಡಿಕೆಗೆ ಹೇಳಿಮಾಡಿಸಿದಂತಿದೆ. 15 ವರ್ಷಗಳ ಬಳಿಕವೂ ನೀವು 5 ವರ್ಷಗಳಂತೆ ಯೋಜನೆಯನ್ನು ವಿಸ್ತರಣೆ ಮಾಡಬಹುದಾಗಿದೆ. ಇದರಿಂದ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಕಾಂಪೌಂಡ್ ಇಂಟರೆಸ್ಟ್ ಲಾಭದ ಪ್ರಮಾಣವು ಜಾಸ್ತಿಯಾಗುತ್ತದೆ. ಆ ಮೂಲಕ ನೀವು ಹೆಚ್ಚು ಆದಾಯ ಪಡೆಯಲು ಸಾಧ್ಯವಾಗುತ್ತೆ.
20 ವರ್ಷ ಹೂಡಿಕೆ ಮಾಡಿದ್ರೆ ಎಷ್ಟು ಸಿಗತ್ತೆ?
ಎಷ್ಟು ವರ್ಷಗಳವರೆಗೆ ವಿಸ್ತರಣೆ ಸಾಧ್ಯ?
ಬ್ಯಾಂಕ್ ಗಳಲ್ಲೂ ಹೂಡಿಕೆ ಮಾಡಬಹುದಾ?
15 ವರ್ಷಗಳ ಬಳಿಕ ಐದು ವರ್ಷಗಳಂತೆ ಎಷ್ಟು ಬಾರಿ ಬೇಕಾದರೂ ವಿಸ್ತರಣೆ ಮಾಡಬಹುದಾಗಿದೆ. ಇದೇ ಲೆಕ್ಕಾಚಾರದಲ್ಲಿ ನೀವು, ತಿಂಗಳಿಗೆ 8 ಸಾವಿರ ರೂ.ನಂತೆ 20 ವರ್ಷಗಳವರೆಗೆ ಹೂಡಿಕೆ ಮಾಡಿದ್ರೆ, ನಿಮಗೆ 37 ಲಕ್ಷ ರೂ. ಲಾಭ ಸಿಗುತ್ತದೆ. ಹೂಡಿಕೆಯ ಮೊತ್ತ, ಶೇ.7.1ರ ಬಡ್ಡಿದರದ ಲಾಭ ಸೇರಿ ಇಷ್ಟು ಮೊತ್ತ ನಿಮ್ಮದಾಗುತ್ತದೆ.
ಇನ್ನು, ಇದೇ ಮೊತ್ತವನ್ನು 25 ವರ್ಷಗಳವರೆಗೆ ಹೂಡಿಕೆ ಮಾಡಿದರೆ 66 ಲಕ್ಷ ರೂಪಾಯಿ ಸಿಗುತ್ತದೆ. ಇಲ್ಲಿಗೆ ನಿಮಗೆ ಚಕ್ರಬಡ್ಡಿಯ ಲಾಭವು ಹೆಚ್ಚಾಗುತ್ತ ಹೋಗುತ್ತದೆ. ಹಾಗೆಯೇ, 30 ವರ್ಷಗಳವರೆಗೆ ಪ್ರತಿ ತಿಂಗಳು 8 ಸಾವಿರ ರೂ. ಉಳಿಕೆ ಮಾಡಿದರೆ, ಹತ್ತಿರತ್ತಿರ 1 ಕೋಟಿ ರೂ. ಸಿಗುತ್ತದೆ. ನಿಖರವಾಗಿ ಹೇಳುವುದಾದರೆ, 98.88 ಲಕ್ಷ ರೂ. ನಿಮ್ಮದಾಗುತ್ತದೆ.