ಉಡುಪಿ : ಅಕ್ಟೋಬರ್ 9 ಅಂದ್ರೆ ಇಂದು, ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದು ಘಟನೆ 13 ವರ್ಷಗಳೇ ಕಳೆದರು ಇನ್ನು ನ್ಯಾಯ ಸಿಕ್ಕಿಲ್ಲ, ಹೋರಾಟ ಮುಗಿದಿಲ್ಲ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸೌಜನ್ಯ ಜನಾಗ್ರಹ ದಿನ ಹಮ್ಮಿಕೊಂಡು ಹತ್ತಿರದ ದೇವಾಲಯಗಳಲ್ಲಿ ನ್ಯಾಯಕ್ಕಾಗಿ ಸೌಜನ್ಯ ಪರ ಹೋರಾಟಗಾರರು ಪೂಜೆ ಸಲ್ಲಿಸಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸೌಜನ್ಯ ಜನಾಗ್ರಹ ದಿನ ಹಮ್ಮಿಕೊಂಡು ಹತ್ತಿರದ ದೇವಾಲಯಗಳಲ್ಲಿ ನ್ಯಾಯಕ್ಕಾಗಿ ಪೂಜೆ ಸಲ್ಲಿಸಿದ್ದಾರೆ.
ಅದರಂತೆ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ತಾಲ್ಲೂಕಿನ ಸೌಜನ್ಯ ಹೋರಾಟಗಾರರು, ಇಷ್ಟ ಸಿದ್ಧಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ತೆರಳಿ ಮಂಗಳಾರತಿ ಸೇವೆ ಕೊಟ್ಟು ಸೌಜನ್ಯ ಸಾವಿಗೆ ನ್ಯಾಯ ಒದಗಿಸು ಎಂದು ಭಕ್ತಿಯಿಂದ ಪ್ರಾರ್ಥಿಸಿದರು.
ಸೌಜನ್ಯ ಫೋಟೋ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದರೆ, ಮಹೇಶ್ ಶೆಟ್ಟಿ ತಿಮ್ಮರೊಡಿ ಫೋಟೋ ಹಿಡಿದು ಅವರ ಸೌಜನ್ಯ ಪರ ಹೋರಾಟಕ್ಕೆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಬಳಿಕ ಕುಂದಾಪುರ ತಾಲ್ಲೂಕು ಸೌಧಕ್ಕೆ ಹಾಗೂ ಪೊಲೀಸ್ ಠಾಣೆಗೆ ತೆರಳಿ ತಹಶೀಲ್ದಾರ್ ಮತ್ತು ಠಾಣಾಧಿಕರಿಗೆ ಮನವಿ ಪತ್ರವನ್ನು ಕೊಟ್ಟು ಸೌಜನ್ಯಳಿಗೆ ನ್ಯಾಯ ಒದಗಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಇನ್ನು ಈ ಸಂದರ್ಭದಲ್ಲಿ ಸೌಜನ್ಯ ಪರ ಪ್ರಮುಖ ಹೋರಾಟಗಾರರಾದ ದಿನೇಶ್ ಗಾಣಿಗ ಹಾಗೂ ಸುಧೀರ್ ಮಲ್ಯಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ತಮ್ಮ ನಿಲುವನ್ನು ಕರ್ನಾಟಕ ನ್ಯೂಸ್ ಬೀಟ್ ಜೊತೆ ಹಂಚಿಕೊಂಡಿದ್ದಾರೆ.