ಬೆಂಗಳೂರು: ಸಾಬೂನು ತಯಾರಿಸಲು ಖ್ಯಾತಿ ಗಳಿಸಿರುವ ಸಂತೂರ್ ಕಂಪನಿಯು 2025-26ನೇ ಸಾಲಿಗೆ ವಿದ್ಯಾರ್ಥಿ ವೇತನ (Santoor Scholarship Program 2025-26) ಘೋಷಣೆ ಮಾಡಿದೆ. ‘ಸಂತೂರ್ ಸ್ಕಾಲರ್ ಶಿಪ್ ಪ್ರೋಗ್ರಾಂ-2025-26’ ವಿದ್ಯಾರ್ಥಿವೇತನ ಘೋಷಣೆ ಮಾಡಲಾಗಿದೆ. ಪದವಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಒಂದು ವರ್ಷಕ್ಕಾಗಿ 30 ಸಾವಿರ ರೂಪಾಯಿವರೆಗೆ ಸ್ಕಾಲರ್ ಶಿಪ್ ಸಿಗಲಿದೆ.
ಅರ್ಹತೆಗಳು ಏನಿರಬೇಕು?
ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು. ವಿದ್ಯಾರ್ಥಿಗಳು ಮಾನ್ಯತೆ ಪಡೆದ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ಪದವಿ ಕೋರ್ಸಿಗೆ ಪ್ರವೇಶಾತಿ ಪಡೆದಿರಬೇಕು. ಕಲೆ, ವಾಣಿಜ್ಯ, ಎಂಜಿನಿಯರಿಂಗ್, ಮೆಡಿಸಿನ್ ಸೇರಿ ಯಾವುದೇ ಕೋರ್ಸ್ ಅಧ್ಯಯನ ಮಾಡುತ್ತಿರುವವರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 8 ಸಾವಿರ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. 2024-25ನೇ ಸಾಲಿನಲ್ಲಿ ಪಿಯುಸಿ ಮುಗಿಸಿದವರಿಗೆ ಮಾತ್ರ ಸ್ಕಾಲರ್ ಶಿಪ್ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸಂತೂರ್, ವಿಪ್ರೋ ಕನ್ಸುಮರ್ ಕೇರ್ ಆ್ಯಂಡ್ ಲೈಂಟಿಗ್ ಗ್ರೂಪ್ ಹಾಗೂ ವಿಪ್ರೋ ಕೇರ್ಸ್ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಕಾಲೇಜು ಫೀಸ್, ಹಾಸ್ಟೆಲ್ ಫೀಸ್, ಅಧ್ಯಯನ ಸಲಕರಣೆಗಳ ಖರೀದಿ ಸೇರಿ ಹಲವು ಶೈಕ್ಷಣಿಕ ವೆಚ್ಚಗಳಿಗೆ ನೆರವಾಗಲಿ ಎಂದು ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಭಾರಿ ಅನುಕೂಲವಾಗಲಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ.
ಆಧಾರ್ ಕಾರ್ಡ್, ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಫೋಟೋ, ಕುಟುಂಬದ ಆದಾಯ ಪ್ರಮಾಣಪತ್ರ, ಕಾಲೇಜು ಪ್ರವೇಶಾತಿ ದಾಖಲೆ, ಶೈಕ್ಷಣಿಕ ದಾಖಲೆ, ಶುಲ್ಕ ಪಾವತಿಸಿದ ರಶೀದಿ ಸೇರಿ ಹಲವು ದಾಖಲೆಗಳನ್ನು ಸಲ್ಲಿಸಬೇಕಾತ್ತದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು https://www.buddy4study.com/page/santoor-scholarship-programme ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.