ಬೆಂಗಳೂರು : ಎಲ್ಲೆಲ್ಲೂ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ-ಸಡಗರ. ಸಿಲಿಕಾನ್ ಸಿಟಿ ಜನ ಸಹ ಹಬ್ಬಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ಖರೀದಿ ಕೂಡ ಬಲು ಜೋರಾಗಿದೆ. ಆದರೆ ಹೂ, ಹಣ್ಣು, ಕಬ್ಬುಗಳ ಬೆಲೆ ಗ್ರಾಹಕರ ಜೇಬಿಗೆ ಕತ್ತರಿಹಾಕಿದಂತಿದೆ.
ಸಿಲಿಕಾನ್ ಸಿಟಿ ಜನರು ಸಂಕ್ರಾತಿ ಹಬ್ಬವನ್ನ ಭರ್ಜರಿಯಾಗಿ ಸಲೆಬ್ರೇಟ್ ಮಾಡೋದಕ್ಕೆ ಕೆ.ಆರ್ ಮಾರುಕಟ್ಟೆಗೆ (KR Market) ಲಗ್ಗೆ ಇಟ್ಟಿದ್ದಾರೆ. ಹೂ, ಕಬ್ಬು, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಜೊತೆಗೆ ರೆಡಿಮೆಡ್ ಎಳ್ಳು-ಬೆಲ್ಲಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಈ ಮಧ್ಯೆ ಪ್ರತಿ ವರ್ಷದಂತೆ ಗಗನಕ್ಕೇರಿರೋ ಹೂವಿನ ದರ ಕಂಡು ಗ್ರಾಹಕರು ಕಂಗಾಲಾಗಿದ್ದಾರೆ.
ಹೂವಿನ ಬೆಲೆ
ಕನಕಾಂಬರ: 700 – 800 ರೂ.
ಕಾಕಡ: 500-600 ರೂ.
ಗುಲಾಬಿ: 80 ರೂ.
ಸೇವಂತಿ: 70 ರೂ.
ಹಣ್ಣುಗಳ ಬೆಲೆ
ಕಬ್ಬು ಜೋಡಿ: 150- 250 ರೂ.
ಸೇಬು ಹಣ್ಣು: 160 ರೂ.
ದಾಳಿಂಬೆ ಹಣ್ಣು: 140 ರೂ.
ಅವರೆಕಾಯಿ: 80-100 ರೂ.
ಮಕರ ಸಂಕ್ರಾತಿ ಹಬ್ಬಕ್ಕೆ ಖರೀದಿ ಬಲು ಜೋರಾಗಿದ್ದು, ಹೂ, ಹಣ್ಣಿನ ಜೊತೆ ರೆಡಿಮೇಡ್ ಎಳ್ಳು ಬೆಲ್ಲಕ್ಕೂ ಡಿಮ್ಯಾಂಡ್ ಹೆಚ್ಚಿದೆ. ಈ ಸಂಕ್ರಾAತಿ ಹಬ್ಬ ನಿಮ್ಮ ಜೀವನದಲ್ಲಿ ಸುಖ-ಶಾಂತಿ-ಸಮೃದ್ಧಿ ನೀಡಲಿ.
ಇದನ್ನೂ ಓದಿ : ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ವಿಶೇಷ ಚರ್ಚೆ | ಜ.22ರಿಂದ 31ರವರೆಗೆ ವಿಧಾನಮಂಡಲ ಅಧಿವೇಶನ ನಡೆಸಲು ಸಂಪುಟ ನಿರ್ಧಾರ!



















