ಭಾರತ ತಂಡದ ಆಯ್ಕೆಯೆಂದರೆ ಅದು ದೊಡ್ಡ ಸವಾಲು. ಅಷ್ಟೊಂದು ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿವೆ. ಅದರಲ್ಲೂ ವಿಕೆಟ್ ಕೀಪರ್‌ಗಳ ವಿಚಾರಕ್ಕೆ ಬಂದಾಗ ಭಾರತದಲ್ಲಿ ಆಯ್ಕೆ ಮಾಡಬಹುದಾದ ಹಲವಾರು ವಿಕೆಟ್‌ಕೀಪರ್‌ಗಳು ಇದ್ದಾರೆ. ರಿಷಭ್‌ಪಂತ್ ಮೊದಲ ಆಯ್ಕೆಯಾದರೆ, ರಾಹುಲ್‌ಗೆ ಅವಕಾಶ ನೀಡಬಹುದು ಎನ್ನುವಷ್ಟು ಉತ್ತಮವಾಗಿ ಕೀಪಿಂಗ್ ಮಾಡುತ್ತಾರೆ. ಸಂಜು ಸ್ಯಾಮ್ಸನ್ ಇತ್ತೀಚೆಗೆ ಬ್ಯಾಟಿಂಗ್‌ನಲ್ಲಿ ಮಿಂಚುವ ಜತೆಗೆ ವಿಕೆಟ್ ಕೀಪಿಂಗ್‌ನಲ್ಲೂ ಛಾಪು ಮೂಡಿಸುತ್ತಿದ್ದಾರೆ. ಇನ್ನು ಇಶಾನ್ ಕಿಶನ್ ಕೂಡ ಉತ್ತಮ ಆಯ್ಕೆಯೇ ಆಗಿದ್ದಾರೆ. ಪ್ರೌಢಿಮೆ ಬಿಟ್ಟರೆ ಅವರೂ ಉತ್ತಮ ಆಟಗಾರರು ಎಂಬುದು ಆಯ್ಕೆಗಾರರಿಗೆ ಗೊತ್ತಿದೆ.
ಇದೀಗ ಭಾರತ ತಂಡ ಆಸ್ಟ್ರೇಲಿಯಾ ಎದುರು ಬಾರ್ಡರ್ ಗವಾಸ್ಕರ್ ಸೋತ ಬೇಸರದಲ್ಲಿದೆ. ಇನ್ನೀಗ ಇಂಗ್ಲೆಂಡ್‌ವಿರುದ್ದ ವೈಟ್‌ಬಾಲ್‌ಸರಣಿಗಳಿಗೆ (IND vs ENG) ಸಜ್ಜಾಗಬೇಕಾಗಿದೆ. ಬಳಿಕ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ 2025ರ ಐಸಿಸಿ ಚಾಂಪಿಯನ್ಸ್‌ಟ್ರೋಫಿ ಟೂರ್ನಿ ಆಡಲಿದೆ. ಹೀಗಾಗಿ ಏಕದಿನ ತಂಡವನ್ನು ಸಜ್ಜುಗೊಳಿಸಬೇಕಾಗಿದೆ. ಆ ನಿಟ್ವಲ್ಲಿ ವಿಕೆಟ್ ಕೀಪರ್ ಯಾರು? ಎಂಬ ಗೊಂದಲ ಉಂಟಾಗಿದೆ. ಪಂತ್‌ಗೆ ವಿಶ್ರಾಂತಿ ಕೊಟ್ಟರೆ ಸಂಜು ಸ್ಯಾಮ್ಸನ್ ಮತ್ತು ಇಶಾನ್ ನಡುವೆ ಪೈಪೋಟಿ ಉಂಟಾಗಲಿದೆ. ಒಂದು ವೇಳೆ ಕಿಶನ್‌ಗೆ ಅವಕಾಶ ಸಿಕ್ಕರೆ ಅವರು ತಂಡಕ್ಕೆ ವಾಪಸ್ ಆದಂತಾಗುತ್ತದೆ.
ಸೈಯದ್‌ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಇಶಾನ್ ಕಿಶನ್ ಅವರು ಮಿಂಚಿನ ಬ್ಯಾಟಿಂಗ್‌ಪ್ರದರ್ಶನ ತೋರಿದ್ದಾರೆ. ಹೀಗಾಗಿ ಅವರು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳಿವೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆಯ್ಕೆಯಾಗಲು ಬಯಸುತ್ತಿರುವ ಸಂಜು ಸ್ಯಾಮ್ಸನ್‌ಗೆ ಇಶಾನ್‌ಗೆ ಜೋರು ಸ್ಪರ್ಧೆಯೊಡ್ಡುತ್ತಿದ್ದಾರೆ.

ಯಾರು ಉತ್ತಮ?
ಆಸ್ಟ್ರೇಲಿಯಾದಲ್ಲಿ ಬಾರ್ಡರ್‌ಗವಾಸ್ಕರ್‌ಟ್ರೋಫಿಯ ಸರಣಿಯನ್ನು ಮುಗಿಸಿಕೊಂಡು ಬಂದಿರುವ ರಿಷಭ್‌ಪಂತ್‌ಗೆ ಇಂಗ್ಲೆಂಡ್ ಟಿ20 ಸರಣಿಯಲ್ಲಿ ವಿಶ್ರಾಂತಿ ಸಿಗಲಿದೆ. ಇಂಗ್ಲೆಂಡ್ ವೈಟ್‌ಬಾಲ್ ಸರಣಿಗಳಲ್ಲಿ ಕನ್ನಡಿಗ ಕೆಎಲ್ ರಾಹುಲ್ ಗೆ ಸಂಪೂರ್ಣ ವಿಶ್ರಾಂತಿ ನೀಡಬಹುದು. ಒಡಿಐ ಸರಣಿಗೆ ರಿಷಭ್‌ಪಂತ್‌ಮರಳಬಹುದು. ಹೀಗಾಗಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ನಡುವೆ ಯಾರು ಉತ್ತಮರು ಎಂಬ ಪ್ರಶ್ನೆ ಎದ್ದಿದೆ.
ಇಶಾನ್ ಕಿಶನ್ ಅವರನ್ನು ಈ ಹಿಂದೆ ಕೇಂದ್ರ ಗುತ್ತಿಗೆಯಿಂದ ಕೈ ಬಿಡಲಾಗಿತ್ತು. ಅವರ ವಿರುದ್ಧದ ಶಿಸ್ತು ಕ್ರಮ ಅದಾಗಿತ್ತು. ಸುಳ್ಳು ಹೇಳಿ ರಜೆ ಪಡೆದು ದುಬೈನಲ್ಲಿ ಪಾರ್ಟಿ ಮಾಡಿದ್ದಕ್ಕೆ ಬಿಸಿಸಿಐ ನೀಡಿದ ಶಿಕ್ಷೆ ಅದಾಗಿತ್ತು. ಇದೀಗ ಅವರು ದೇಶಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ತಂಡಕ್ಕೆ ಮರು ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ.
ಇನ್ನೊಂದು ಕಡೆ ಸಂಜು ಸ್ಯಾಮ್ಸನ್ ಅವರು ತಾವು ಆಡಿದ ಕೊನೆಯ ಐದು ಟಿ20ಐ ಪಂದ್ಯಗಳಲ್ಲಿ ಸಂಜು, ಮೂರು ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಅವರನ್ನು ಆಯ್ಕೆ ಮಾಡದೇ ಹೋದರೆ ಅಭಿಮಾನಿಗಳ ಟೀಕೆಗೆ ಆಯ್ಕೆಗಾರರು ಒಳಗಾಗಲೇಬೇಕಾಗುತ್ತದೆ.
ಇಬ್ಬರ ಟಿ20 ಸಾಧನೆಗಳು ಇಂತಿವೆ
ಇಶಾನ್ ಕಿಶನ್ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಆಡಿದ 32 ಪಂದ್ಯಗಳಿಂದ 25.67ರ ಸರಾಸರಿಯಲ್ಲಿ 796 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು 124.37ರ ಸ್ಟ್ರೈಕ್‌ರೇಟ್‌ನಲ್ಲಿ 6 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಸಂಜು ಸ್ಯಾಮ್ಸನ್ ಆಡಿದ 37 ಪಂದ್ಯಗಳಿಂದ 27.93ರ ಸರಾಸರಿ ಮತ್ತು 155.17ರ ಸ್ಟ್ರೈಕ್‌ರೇಟ್‌ನಲ್ಲಿ 810 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು 3 ಶತಕಗಳು ಹಾಗೂ ಎರಡು ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದಾರೆ.
ಟಿ20 ಸಾಧನೆ ವಿಚಾರಕ್ಕೆ ಬಂದಾಗ ಸಮಬಲದ ಸಾಧನೆ ತೋರಿದ್ದಾರೆ. ಆದರೆ, ಸಂಜು ಸ್ಯಾಮ್ಸನ್‌ಕಳೆದ ಐದು ಪಂದ್ಯಗಳಲ್ಲಿ ತೋರಿರುವ ಪ್ರದರ್ಶನದಿಂದ ಅವರು ಇಶಾನ್‌ಕಿಶನ್‌ಅವರನ್ನು ಹಿಂದಿಕ್ಕಬಹುದು. ಅಲ್ಲದೆ ಐಸಿಸಿ ಚಾಂಪಿಯನ್ಸ್‌ಟ್ರೋಫಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅವರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲು ಒಳ್ಳೆಯ ಅವಕಾಶ ಸಿಗಲಿದೆ.