ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರಿಗೆ ಎಷ್ಟೇ ದುಡ್ಡು ಕೊಟ್ಟರು ಸಿಗದೇ ಇರುವುದು ಆರೋಗ್ಯ. ಇದೇ ದೃಷ್ಟಿಯಿಂದ ʼನಮ್ಮ ಆಹಾರದಲ್ಲಿ- ನಮ್ಮ ಆರೋಗ್ಯವಿದೆʼ ಎಂಬ ಉದ್ದೇಶದೊಂದಿಗೆ ಉಚಿತ ಸಂಜೀವಿನಿ ಲಡ್ಡು ವಿತರಣಾ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದು ಚಿಲುಮೆ ರವಿಕುಮಾರ್ ಫೌಂಡೇಶನ್ ಸಂಸ್ಥಾಪಕ ಹೇಳಿದ್ದಾರೆ.
ಚಿಲುಮೆ ರವಿಕುಮಾರ್ ಫೌಂಡೇಶನ್ ವತಿಯಿಂದ ಸಂಜೀವಿನಿ ಲಡ್ಡು ವಿತರಣಾ ಕಾರ್ಯಕ್ರಮವನ್ನು ಇಂದು (ಗುರುವಾರ) ರಾಜಾಜಿನಗರದ ಮಂಜುನಾಥ ನಗರದಲ್ಲಿ ಚಿಲುಮೆ ರವಿಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಿಲುಮೆ ರವಿಕುಮಾರ್, ಚಿಲುಮೆ ಫೌಂಡೇಶನ್ 2013 ರಿಂದ ಶಿಕ್ಷಣ, ಆರೋಗ್ಯ, ಸ್ವಚ್ಛತೆಯ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ʼನಮ್ಮಆಹಾರದಲ್ಲಿ ಆರೋಗ್ಯ ಇದೆʼ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮನ ಆರಂಭ ಮಾಡಿದ್ದೇವೆ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರಿಂದ ಹಲವು ಜೀವಗಳು ಉಳಿಯುತ್ತವೆ ಎಂದು ಹೇಳಿದ್ದಾರೆ.
ನಮ್ಮ ಸಂಜೀವಿನಿಯಲ್ಲಿ ದೇಹದಲ್ಲಿನ ಎಲ್ಲಾ ರೋಗಗಳನ್ನು ನಿವಾರಿಸುವ ಶಕ್ತಿ ಇದೆ. ಇದು ಉಚಿತವಾಗಿ ಕೊಡುವಂತಹ ಒಂದು ಲಡ್ಡುಇದರ ವ್ಯಾಪಾರ ಮಾಡುವ ಯಾವುದೇ ಉದ್ದೇಶ ಇಲ್ಲ. ಪ್ರತಿ ಗುರುವಾರ 1,000 ಜನಕ್ಕೆ ವಿತರಿಸಲಾಗುವುದು. ಸ್ವಯಂಸೇವಕರು ಎಲ್ಲ ಸೇರಿ ಹಣ ಹಾಕಿ ವಿತರಣೆ ಮಾಡಲಾಗುತ್ತೆ. ಸಮಾಜ ಸೇವೆ, ಜನಸೇವೆ ಮಾಡುವ ದೇಶದಿಂದ ಈ ಲಡ್ಡು ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ತಜ್ಞ ವೈದ್ಯರ ಹೇಳಿಕೆಯ ಪ್ರಕಾರ ಇದರಲ್ಲಿ ಬಳಕೆಯಾಗಿರುವ ಎಲ್ಲಾ ಪದಾರ್ಥಗಳ ಪೈಕಿ ಅಗಸೆಬೀಜದ ಅಂಶವು ಮನುಷ್ಯನ ದೇಹದಲ್ಲಿ ರಕ್ತದಲ್ಲಿನ ಉತ್ತಮ ಕೊಬ್ಬಿನಾಂಶವನ್ನು ವೃದ್ಧಿಗೊಳಿಸುತ್ತದೆ. ಹಾಗೆಯೇ ಅಮೃತಬಳ್ಳಿ ಅಂಶವು ಮನುಷ್ಯನ ಮೆದುಳನ್ನು ಚುರುಕುಗೊಳಿಸುವುದರ ಜೊತೆಗೆ ಎಲ್ಲಾ ನರಮಂಡಲ ವ್ಯವಸ್ಥೆಯನ್ನು ಚುರುಕುಗೊಳಿಸಿ ಕಣ್ಣಿನ ಆರೋಗ್ಯಕ್ಕೂ ಸಹಕಾರಿಯಾಗಿದ್ದು, ವಿಶೇಷವಾಗಿ ಹೆಣ್ಣುಮಕ್ಕಳ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಸೇರಿದಂತೆ ಇನ್ನಿತರೆ ಹಲವು ವಿಧದ ಕಾನ್ಸರ್ ತಡೆಯಲು ಪರಿಣಾಮಕಾರಿಯಾಗಿದೆ. ಪ್ರಮುಖವಾಗಿ ಹೃದಯದ ಆರೋಗ್ಯವನ್ನು ಕಾಪಾಡುವುದಷ್ಟೇ ಅಲ್ಲದೆ ಮನುಷ್ಯನ ದೇಹದ ಇನ್ನಿತರೆ ರೋಗ-ರುಜಿನಗಳನ್ನು ತೊಡೆದುಹಾಕುವ “ರಾಮಬಾಣ”ವಾಗಿ ಕಾರ್ಯನಿರ್ವಹಿಸುತ್ತದೆ.
ಚಿಲುಮೆ ರವಿಕುಮಾರ್ ಫೌಂಡೇಶನ್ 2013 ರಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅರಿವು ಮೂಡಿಸುತ್ತಿದೆ. ಈ ಬಾರಿ ಸಂಜೀವಿನಿ ಲಡ್ಡು ವಿತರಿಸುವ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಹಿತರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಿದೆ.