ನಟಿ ಸಂಜನಾ ಬುರ್ಲಿ ಅವರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಅವರು ನಟಿಸಿ ಗಮನ ಸೆಳೆದರು. ಈಗ ಅವರು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.

ಸಂಜನಾ ಅವರು ನಿಶ್ಚಿತಾರ್ಥವು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಏಕೆಂದರೆ ಸಂಜನಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆ ಯಾವುದೇ ಸುದ್ದಿ ನೀಡಿರಲಿಲ್ಲ.

ಸಂಜನಾ ಮದುವೆ ಆಗುತ್ತಿರುವ ಹುಡುಗನನ್ನೂ ಪರಿಚಯಿಸಿದ್ದು, ಹುಡುಗನ ಹೆಸರು ಸಮರ್ಥ್ ಚನ್ನಗಿರಿ ಮೂಲದವರು. ಅವರು ಎಂಬಿಬಿಎಸ್, ಎಂಡಿ ಓದಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ ಎನ್ನಲಾಗಿದೆ.

ಸಂಜನಾ ಅವರು ‘ಪುಟ್ಟಕ್ಕನ ಮಕ್ಕಳು’ ಬಳಿಕ ಕಲರ್ಸ್ನ ‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಹಲವು ಎಪಿಸೋಡ್ಗಳನ್ನು ಪೂರ್ಣಗೊಳಿಸಿದೆ. ಹೀಗಿರುವಾಗಲೇ ಸಂಜನಾ ಜೊತೆ ನಿಶ್ಚಿತಾರ್ಥ ನೆರವೇರಿದೆ.
ಇದನ್ನೂ ಓದಿ : ‘ಅಮೃತ ಅಂಜನ್’ : ಕಾಮೆಡಿ ಉತ್ಸವ..!



















