ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಬಿಕ್ಲು ಶಿವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಬೈರತಿ ಬಸವರಾಜ್ ಗೆ ಸಂಕಷ್ಟ ಶುರುವಾಗಿದೆ. ಈ ಮಧ್ಯೆ ಕೊಲೆಯ ಆರೋಪಿ ಎನ್ನಲಾಗಿರುವ ಜಗ್ಗನ ಜೊತೆ ನಟಿ ರಚಿತಾ ರಾಮ್ ಇರುವ ಫೋಟೋವೊಂದು ವೈರಲ್ ಆಗಿದೆ. ವೈರಲ್ ಆಗಿರುವ ಫೋಟೋದಲ್ಲಿ ನಟಿ ರಚಿತಾ ರಾಮ್ ಗೆ ಜಗ್ಗ ಗಿಫ್ಟ್ ಕೊಡುತ್ತಿದ್ದಾನೆ.
ನಟಿಗೆ ನಕ್ಲೇಸ್, ಓಲೆ, ಸೀರೆ ಕೊಡುತ್ತಿರುವಂತೆ ಈ ಫೋಟೋ ಇದ್ದು, ರವಿಚಂದ್ರನ್ ಸೇರಿದಂತೆ ಹಲವು ನಟರು ಕೂಡ ಫೋಟೋದಲ್ಲಿದ್ದಾರೆ. ಹೀಗಾಗಿ ಈ ಫೋಟೋ ಕುರಿತು ಖಾಕಿ ಪಡೆ ತನಿಖೆ ನಡೆಸುತ್ತಿದ್ದು, ಮಾಹಿತಿ ಸಂಗ್ರಹಿಸುತ್ತಿದೆ.