ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ.
ಜೀವಂತವಾಗಿರಲು ಬಯಸಿದರೆ ದೇವಸ್ಥಾನದಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದರೆ 5 ಕೋಟಿ ರೂ. ಹಣ ಕೊಡಿ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ (Salman Khan) ಮತ್ತೆ ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೊಂದು ಬೆದರಿಕೆ ಬಂದಿದೆ.
ಈ ಕುರಿತು ಮುಂಬಯಿ ಪೊಲೀಸರಿಗೆ ವಾಟ್ಸಾಪ್ ಕರೆ ಬಂದಿದೆ. ಟ್ರಾಫಿಕ್ ಕಂಟ್ರೋಲ್ ರೂಂಗೆ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬೆದರಿಕೆ ಸಂದೇಶ ಬಂದಿದೆ. ಈ ಸಂದೇಶದಲ್ಲಿ ಬಿಷ್ಣೋಯ್ ಸಹೋದರ ಮಾತನಾಡಿದ್ದಾರೆ ಎನ್ನಲಾಗಿದೆ. ‘ಸಲ್ಮಾನ್ ಖಾನ್ ಬದುಕಬೇಕಾದರೆ, ಅವರು ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ 5 ಕೋಟಿ ರೂ. ನೀಡಬೇಕು. ಹಾಗೆ ಮಾಡದಿದ್ದರೆ ನಾವು ಅವನನ್ನು ಕೊಲ್ಲುತ್ತೇವೆ. ನಮ್ಮ ಗ್ಯಾಂಗ್ ಸಕ್ರಿಯವಾಗಿದೆ ಎಂದು ಬೆದರಿಕೆ ಹಾಕಿದ್ದಾರೆ.