ಬೆಂಗಳೂರು: ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಗಾಂಜಾ ಮಾರುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೈಲಿನಲ್ಲಿರುವ ಕಿಂಗ್ ಪಿನ್ ನ ಸೂಚನೆಯಂತೆ ನಗರದ ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಪೋರ್ಟರ್ ಮೂಲಕ ಡ್ರಗ್ಸ್ ಪೂರೈಸುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸಂಗ್ರಹಿಸಿಟ್ಟಿದ್ದ 71 ಲಕ್ಷ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್, ಹೈಡ್ರೋ ಗಾಂಜಾ, ಎಲ್‌ಎಸ್‌ಡಿ ಸ್ಟ್ರಿಫ್ಸ್ ಹಾಗೂ ಹಾಶಿಶ್ ಆಯಿಲ್ ನ್ನು ವಶಕ್ಕೆ ಪಡೆಯಲಾಗಿದೆ.
ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗೌತಮ್, ಡ್ರಗ್ಸ್ ದಂಧೆಗೆ ಕೈ ಹಾಕಿದ ನಂತರ ಉದ್ಯೋಗವನ್ನೇ ತೊರೆದಿದ್ದ. ಕಳೆದ ಒಂದೂವರೆ ವರ್ಷದಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಆನಂತರ ಹಲವರೊಂದಿಗೆ ಸೇರಿ ಈ ದಂಧೆ ಮುಂದುವರೆಸಿದ್ದ.
ವ್ಯಾಟ್ಸಾಪ್‌ನಲ್ಲಿಯೇ ಗಿರಾಕಿಗಳ ಲೊಕೇಶನ್ ಪಡೆದು ಡಂಝೋ ಹಾಗೂ ಪೋರ್ಟರ್ ಮೂಲಕ ತಲುಪಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.