ಬೆಂಗಳೂರು: ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಂಬಾಳೆ ಫಿಲ್ಮ್ಸ್ ಹೆಸರು ಮಾಡುತ್ತಿದೆ. ಈಗ ಹೊಂಬಾಳೆಯಿಂದ ಸಿದ್ಧಗೊಂಡ ಪ್ರಭಾಸ್ ನಟನೆಯ ಸಲಾರ್ ಮರು ಬಿಡುಗಡೆಯಾಗಿದೆ.
ಬಿಗ್ ಬಜೆಟ್‌ನ ಸಾಲು ಸಾಲು ಸಿನಿಮಾಗಳಲ್ಲಿ ಚಿತ್ರೋದ್ಯಮಕ್ಕೆ ನೀಡಿರುವ ಇದೇ ಸಂಸ್ಥೆ, ಈಗಾಗಲೇ ಸರಣಿ ಹಿಟ್ ಸಿನಿಮಾಗಳನ್ನೇ ನೀಡಿದೆ. ರಾಜಕುಮಾರ, ಯುವರತ್ನ, ಬಘೀರ, ಕೆಜಿಎಫ್ ಚಾಪ್ಟರ್ 1 ಮತ್ತು 2, ಕಾಂತಾರ ಸಿನಿಮಾಗಳು ಹಿಟ್ ಲಿಸ್ಟ್ ನಲಿದೆ. ಹೀಗಿರುವಾಗಲೇ ಇದೇ ಸಂಸ್ಥೆಯ ಮತ್ತೊಂದು ಬಿಗ್ ಬಜೆಟ್ ಸಿನಿಮಾ, “ಸಲಾರ್ ಪಾರ್ಟ್ 1 ಸೀಸ್ ಫೈರ್” ಇಂದು (ಮಾರ್ಚ್ 21) ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್‌ನ ಸಲಾರ್ ಸಿನಿಮಾ ಈಗಾಗಲೇ ಬ್ಲಾಕ್ ಬಸ್ಟರ್ ಹಿಟ್ ಪಟ್ಟಿ ಸೇರಿದ ಸಿನಿಮಾ. ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಅಭಿಮಾನಿಗಳನ್ನು ರಂಜಿಸಿದೆ. ಈ ನಡುವೆ ಇದೇ ಹೈ-ಆಕ್ಟೇನ್ ಆಕ್ಷನ್ ಸಿನಿಮಾ ಅಭಿಮಾನಿಗಳ ಒತ್ತಾಸೆ ಮೇರೆಗೆ ಮರು ಬಿಡುಗಡೆ ಆಗಿದೆ.
ಈಗಾಗಲೇ ಮೊದಲ ಭಾಗದ ಬಳಿಕ ‘ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ’ ಸಲುವಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದರ ನಡುವೆಯೇ ಮೊದಲ ಭಾಗದ ಮರುಬಿಡುಗಡೆ ಮತ್ತಷ್ಟು ಕುತೂಹಲ ಮೂಡಿದೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ, ಕರ್ನಾಟಕ ಸೇರಿ ಇತರ ರಾಜ್ಯಗಳಲ್ಲಿಯೂ ಸಲಾರ್ ಸಿನಿಮಾ ಮರು ಬಿಡುಗಡೆ ಆಗಿದೆ.
“ಸಲಾರ್‌ನ ಮರುಬಿಡುಗಡೆ ಒಂದು ರೀತಿ ರೋಮಾಂಚನಕಾರಿಯಾಗಿದೆ. ಚಿತ್ರಮಂದಿರಗಳಲ್ಲಿ ಸಲಾರ್ ಸಿನಿಮಾ ಮತ್ತೆ ಘರ್ಜಿಸುತ್ತಿದೆ. ಭಾಗ 2ಕ್ಕೆ ನಾವು ಸಜ್ಜಾಗುತ್ತಿರುವಾಗ ಈ ಪ್ರತಿಕ್ರಿಯೆ ನಮಗೆ ಸ್ಫೂರ್ತಿ ನೀಡುತ್ತದೆ. ಮರುಬಿಡುಗಡೆಯನ್ನು ಮತ್ತೆ ಒಪ್ಪಿಕೊಂಡಿದ್ದಕ್ಕೆ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು” ಎಂದಿದ್ದಾರೆ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು.
“ಸಲಾರ್ ಯಾವಾಗಲೂ ನಮ್ಮ ಹೃದಯಕ್ಕೆ ಹತ್ತಿರವಾದ ಚಿತ್ರವಾಗಿದೆ. ಮರುಬಿಡುಗಡೆಗೆ ಬಂದಿರುವ ಅಗಾಧ ಪ್ರತಿಕ್ರಿಯೆಯು ಪ್ರೇಕ್ಷಕರು ನಮ್ಮ ಕಥೆಗಳ ಬಗ್ಗೆ ತೋರಿಸುತ್ತಿರುವ ಪ್ರೀತಿಯ ಪ್ರತಿಬಿಂಬವಾಗಿದೆ. ಚಿತ್ರಮಂದಿರಗಳು ಮತ್ತೆ ಹೌಸ್‌ಫುಲ್ ಆಗುತ್ತಿರುವುದನ್ನು ನೋಡಲು ನಾವು ಕೃತಜ್ಞರಾಗಿರುತ್ತೇವೆ” ಎಂಬುದು ಹೊಂಬಾಳೆ ಫಿಲಂಸ್‌ನ ಸಹ ಸಂಸ್ಥಾಪಕ ಚಲುವೆ ಗೌಡ ಅವರ ಮಾತು.