ಉಡುಪಿ:ಅ.6 ರಿಂದ ಕರ್ನಾಟಕ ಮತ್ತು ಗೋವಾದ ಆಯ್ದ 72 ಎನ್ ಸಿಸಿ ಕೆಡೆಟ್ ಗಳ ನೌಕಾಯಾನ ಶಿಬಿರಕ್ಕೆ ಕಡಲನಗರಿ ಉಡುಪಿ ಸಾಕ್ಷಿಯಾಗಲಿದೆ.
ಅಕ್ಟೋಬರ್ 6 ರಿಂದ ಶಿಬಿರ ಪ್ರಾರಂಭವಾಗಲಿದ್ದು, 15 ದಿನಗಳ ಕಾಲ ನದಿ ಹಾಗೂ ಸಾಗರಗಳಲ್ಲಿ ನೌಕಾಯಾನ ಶಿಬಿರ ನೆಡೆಯಲಿದೆ.
ಕರ್ನಾಟಕ ಮತ್ತು ಗೋವಾ ಎನ್ ಸಿಸಿ ನಿರ್ದೇಶನಾಲಯದ ಮಾರ್ಗದರ್ಶನದಲ್ಲಿ ಉಡುಪಿಯ ಎನ್ ಸಿಸಿ ನಂಬರ್ 6 ಕರ್ನಾಟಕ ನೌಕಾ ಘಟಕವು ಆಯೋಜಿಸಿರುವ ಶಿಬಿರವನ್ನು, ಕರ್ನಲ್ ವಿರಾಜ್ ಕಾಮತ್ ನೇತೃತ್ವದ ಗ್ರೂಪ್ ಹೆಡ್ ಕ್ವಾರ್ಟರ್ಸ್ ಮಂಗಳೂರಿನ ಆಶ್ರಯದಲ್ಲಿ ನೆಡೆಸಲಾಗುತ್ತದೆ.
ಈ ಕಾರ್ಯಾಚರಣೆಯ ನಾಯಕತ್ವವನ್ನು ಕಮಾಂಡಿಂಗ್ ಆಫಿಸರ್ 6 ಕರ್ನಾಟಕ ನೇವಲ್ ಯುನಿಟ್ ಎನ್ ಸಿಸಿ,ಉಡುಪಿ ಇದರ ಕಮಾಂಡೆಂಟ್ ಸಿಡಿಆರ್ ಅಶ್ವಿನ್ ಎಮ್.ರಾವ್ ವಹಿಸಲಿದ್ದಾರೆ.