ಬಾಂದ್ರಾದ ನಿವಾಸಕ್ಕೆ ನುಗ್ಗಿ ನಟ ಸೈಫ್ ಅಲಿಖಾನ್ (Saif ali Khan) ಮೇಲೆ ಹಲವು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಠಾಣೆ ಪೊಲೀಸರು ಭಾನುವಾರ ಮುಂಜಾನೆ ಬಂಧಿಸಿದ್ದಾರೆ. ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಬಂಧಿತ. ಈತ ಇನ್ನೂ ಹಲವಾರು ಹೆಸರುಗಳನ್ನು ಇಟ್ಟುಕೊಂಡಿದ್ದಾಣೆ. ಬಿಜೋಯ್ ದಾಸ್, ವಿಜಯ್ ದಾಸ್, ಮೊಹಮ್ಮದ್ ಇಲ್ಯಾಸ್ ಮತ್ತು ಬಿಜೆ ಎಂದು ಹೇಳಿಕೊಂಡಿದ್ದಾನೆ.
ಹೌಸ್ ಕೀಪಿಂಗ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಶೆಹಜಾದ್ ನನ್ನು ನಗರದ ಹಿರಾನಂದಾನಿ ಎಸ್ಟೇಟ್‌ನ ಮೆಟ್ರೋ ನಿರ್ಮಾಣ ಸ್ಥಳದ ಬಳಿಯ ಕಾರ್ಮಿಕ ಶೆಡ್‌ನಲ್ಲಿ ಬಂಧಿಸಲಾಗಿದೆ
ಮಾಧ್ಯಮಗಳ ಜತೆ ಮಾತನಾಡಿದ ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು, ಆರೋಪಿ ಬಾಂಗ್ಳಾದೇಶ ಪ್ರಜೆ ಎಂಬ ಅನುಮಾನವೂ ಇದೆ. ಆತನಿಂದ ವಶಪಡಿಸಿಕೊಳ್ಳಲಾದ ದಾಖಲೆಗಳು ಈ ರೀತಿಯ ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಆರೋಪಿ ಕಳೆದ ಐದು-ಆರು ತಿಂಗಳಿನಿಂದ ಮುಂಬೈ ಮತ್ತು ಥಾಣೆಯ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಕ್ಕೆ ಮೊದಲು ಆತ ಗುತ್ತಿಗೆದಾರರೊಂದಿಗೆ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಮೇಲಿನ ದಾಳಿ ನಂತರ, ಆರೋಪಿ ನಿರಂತರವಾಗಿ ಮಾಧ್ಯಮಗಳ ಮೂಲಕ ಪೊಲೀಸರ ಕಾರ್ಯಾಚರಣೆ ಬಗ್ಗೆ ನೋಡುತ್ತಿದ್ದ ಎಂದುಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. .
ಘಟನೆ ನಂತರ ದಾದರ್ ರೈಲ್ವೆ ನಿಲ್ದಾಣದಲ್ಲಿ ಕಾಣಿಸಿಕೊಂಡ ಕ್ಲಿಪ್ ಸೇರಿದಂತೆ ಹಲವಾರು ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.