ಬಾಲಿವುಡ್ ನಟ ಸೈಫ್ ಅಲಿ ಖಾನ್(Saif Ali Khan) ಮೇಲೆ ಕಳ್ಳರು ದಾಳಿ ಮಾಡಿ, ಚಾಕುವಿನಿಂದ ಇರಿದಿದ್ದಾರೆ. ಈ ಘಟನೆಯಲ್ಲಿ ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅವರ ಬಳಿ ಸಾಕಷ್ಟು ಕಾರುಗಳಿದ್ದರೂ ಆಟೋದಲ್ಲಿ ಆಸ್ಪತ್ರೆಗೆ(hospital) ದಾಖಲಾಗಿರುವುದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಬೆಳಿಗ್ಗೆ 2.30 ಸುಮಾರಿಗೆ ಮನೆಯಲ್ಲಿ ನಡೆಯುತ್ತಿದ್ದ ಗಲಾಟೆ ಕೇಳಿ ಸೈಫ್ ಎಚ್ಚರವಾಗಿದ್ದಾರೆ. ಆಗ ಅವರ ಹೊರ ಬಂದಾಗ ಕಳ್ಳ ಕಂಡಿದ್ದಾನೆ. ಆತನನ್ನು ತಡೆದಾಗ ಕತ್ತು, ಬೆನ್ನು ಸೇರಿ ಆರು ಕಡೆ ಚಾಕುವಿನಿಂದ ಆತ ಇರಿದಿದ್ದಾನೆ ಎನ್ನಲಾಗಿದೆ. ಬೆನ್ನಿನ ಭಾಗಕ್ಕೆ ಸೈಫ್ಗೆ ತೀವ್ರವಾಗಿ ಗಾಯವಾಗಿತ್ತು. ಚಾಕುವಿನ ಚೂರು ಕೂಡ ಅವರ ಬೆನ್ನಿನಲ್ಲೇ ಉಳಿದುಕೊಂಡು ಬಿಟ್ಟಿತ್ತು. ಆನಂತರ ಸೈಫ್ ಆಟೋದಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ.
ಸೈಫ್ ಅಲಿ ಖಾನ್ ಅವರು ಸದ್ಗುರು ಶರಣ್ ಅಪಾರ್ಟ್ಮೆಂಟ್ನಲ್ಲಿ(Sadhguru Sharan’s apartment) ವಾಸವಾಗಿದ್ದಾರೆ. ಅವರ ಮನೆಯಿಂದ ಲೀಲಾವತಿ ಆಸ್ಪತ್ರೆ ಕೇವಲ 1.6 ಕಿ.ಮೀ. ದೂರ. ಆದರೆ, ಮನೆಯಲ್ಲಿದ್ದ ಕಾರುಗಳು ಏನಾದವು? ಯಾವ ಕಾರಣಕ್ಕೆ ಸೈಫ್ ಆಟೋದಲ್ಲಿ ಹೋದರು? ಎಂಬುವುದು ಈಗ ಚರ್ಚೆಯ ವಿಷಯವಾಗಿದೆ.