ಬೆಂಗಳೂರು: ಹಿರಿಯ ಹಾಸ್ಯ ಸಾಧು ಕೋಕಿಲ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ಸಂಗೀತ ಕ್ಷೇತ್ರದಲ್ಲಿನ ಸಾಧನೆ ಗಮನಿಸಿ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿರುವ ಸಾಧು ಕೋಕಿಲ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಾಗೂ ಫೋಟೋ ಹಂಚಿಕೊಂಡಿದ್ದಾರೆ. ‘ಈ ನನ್ನ ಸಂಗೀತ ಪಯಣದಲ್ಲಿ ಬೆಂಬಲವಾಗಿ ನಿಂತ ಎಲ್ಲ ಸಂಗೀತ ಪ್ರೇಮಿಗಳು ಮತ್ತು ಹಿತೈಷಿಗಳಿಗೆ ನನ್ನ ಅನಂತಾನಂತ ವಂದನೆಗಳು’ ಎಂದು ಈ ವೇಳೆ ಬರೆದುಕೊಂಡಿದ್ದಾರೆ.
ಗೌರವ ಡಾಕ್ಟರೇಟ್ ಪಡೆದಿರುವ ಬಗ್ಗೆ ಸಾಧು ಕೋಕಿಲ ಹೆಮ್ಮೆ ಪಟ್ಟಿದ್ದಾರೆ. ಹೀಗಾಗಿ ‘ಸಾಧು ನಹಿ ಡಾಕ್ಟರ್ ಸಾಧು ಬೋಲೋ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.