ಚನ್ನಪಟ್ಟಣ : ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡುವ ವಿಚಾರ ಮೊದಲ ನಿರ್ಧಾರವಾಗಿತ್ತು. ಹಾಗಾಗಿ ಅನುದಾನ ನೀಡುತ್ತಿದ್ದೇವೆ. ಬಿಜೆಪಿ ಶಾಸಕೆರಿಗೂ ಅನುದಾನ ನೀಡುತ್ತಿದ್ದೇವೆ. ಯಾರೂ ಗಾಬರಿಯಾಗುವುದು ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣದ ಹೊಂಗನೂರಿನಲ್ಲಿ ಮಾತನಾಡಿದ ಡಿಕೆಶಿ, ಮೊದಲು ಅವರು ಏನು ಮಾಡಿದ್ದರು ಎನ್ನುವುದನ್ನು ಮರೆತಿದ್ದಾರೆ. ನನ್ನ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಕೊಟ್ಟು ವಾಪಾಸ್ ಪಡೆದುಕೊಂಡಿದ್ದರು. ಈಗ ಅನುದಾನದ ಬಗ್ಗೆ ಏನೇನೋ ಮಾತನಾಡುತ್ತಾರೆ ಎಂದು ಅವರು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಶಾಲೆಗಳಿಗೆ ಹುಸಿ ಬಾಂಬ್ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವೆಲ್ಲವೂ ಸುಳ್ಳು, ಯಾರು ನಂಬುವುದು ಬೇಡ ಎಂದಿದ್ದಾರೆ. ನಮ್ಮ ಕಾಂಗ್ರೆಸ್ ಸಾಧನ ಸಮಾವೇಶವಿದೆ, ನಮ್ಮ ಸರ್ಕಾರದ ಕಾರ್ಯಕ್ರಮ ಎಂದು ಡಿಕೆಶಿ ಹೇಳಿದ್ದಾರೆ.