ಮೈಸೂರು : ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸುವ ಬಿಜೆಪಿ-ಜೆಡಿಎಸ್ ನವರು ಒಂದೇ ವೇದಿಕೆಗೆ ಬನ್ನಿ. ನಿವೇನು ಮಾಡಿದ್ದೀರಿ, ನಾವೇನು ಮಾಡಿದ್ದೇವೆ ಎಂಬುವುದನ್ನು ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.
೨೫೭೮ ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಭೆಗೆ ಜೆಡಿಎಸ್- ಬಿಜೆಪಿಯವರು ಬರಬೇಕಿತ್ತು. ಮೈಸೂರಿನಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ. ಎನ್ನುವುದು ಅವರಿಗೆ ಗೊತ್ತಾಗುತ್ತಿತ್ತು. ಜನರನ್ನು ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕಾದರೆ ನೀವು ಒಂದೇ ವೇದಿಕೆಗೆ ಬನ್ನಿ. ಚರ್ಚೆ ಮಾಡೋಣ ಎಂದು ಸವಾಲೆಸಿದಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ ಆಗಿದ್ದರೆ ಕೇವಲ ಮೈಸೂರಿಗೆ ೨೫೭೮ ಕೋಟಿ ರೂಪಾಯಿ ಅನುದಾನ ನೀಡಲು ಆಗುತ್ತಿರಲಿಲ್ಲ. ಯಾರೂ ಬೇಕಾದರೂ ಪರಿಶೀಲನೆ ಮಾಡಲಿ ಎಂದು ಹೇಳಿದರು.
ಇದು ಸಿದ್ದರಾಮಯ್ಯನ ಶಕ್ತಿ ಪ್ರದರ್ಶನ ಅಲ್ಲ. ಅಭಿವೃದ್ಧಿಯ ಶಕ್ತಿಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಬಿಜೆಪಿ-ಜೆಡಿಎಸ್ ನವರಿಗೆ ಈ ಮಟ್ಟಿನ ಮತ್ಸರ ಇರಬಾರದು. ನೀವು ಮೈಸೂರಿಗೆ ಏನು ಸಾಕ್ಷಿಗುಡ್ಡೆ ಬಿಟ್ಟು ಹೋಗಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು.
ನೀವೆಂದು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರಲ್ಲ. ಆಪರೇಷನ್ ಕಮಲದಿಂದ ಅಧಿಕಾರ ಗಿಟ್ಟಿಸಿದ್ದೀರಿ. ಜೆಡಿಎಸ್ ಶಾಸಕರ ಸಂಖ್ಯೆ ಪ್ರತಿ ಐದು ವರ್ಷಕ್ಕೆ ಕಡಿಮೆ ಆಗುತ್ತಲೆ ಇವೆ. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ ೫೯ ಸ್ಥಾನ ಗೆದ್ದಿದ್ದೇವು. ಈಗ ೧೮ಕ್ಕೆ ಇಳಿದಿದ್ದೀರಿ. ಮುಂದೆಂದೂ ನೀವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದು ಗೊತ್ತಾಗಿ ಬಿಜೆಪಿ ಸೇರಿದ್ದೀರಿ ಎಂದು ಟೀಕಿಸಿದರು.
೨೦೧೮ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕೇವಲ ೧ ಸ್ಥಾನ ಗೆದ್ದಿದ್ದ ನಾವು ಕಳೆದ ಚುನಾವಣೆಯಲ್ಲಿ ೯ ಸ್ಥಾನ ಗೆದ್ದೆವುಇ. ನೀವು ಮರ್ಯಾದೆ ಉಳಿಸಿಕೊಂಡಿದ್ದೀರ ? ಇಷ್ಟು ಜನ ಸಂಸದರಾಗಿದ್ದೀರಲ್ಲ, ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲು ವಾಪಾಸ್ ಕೊಡಿಸುತ್ತೀರ ಎಂದು ಮೇಜು ಕುಟ್ಟಿ ಪ್ರಶ್ನಿಸಿದ್ದಾರೆ.



















