ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ, ಹೊಸ ತಲೆಮಾರಿನ ಸಿನಿಮಾಗಳು ಬರ್ತಿವೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಕಂಪು ಇಂಪನ್ನ ಸೂಸ್ತಿವೆ. ಈ ಬೆಳವಣಿಗೆಗೆ ಅಡಿಪಾಯ ಹಾಕಿದವರು, ಆ ಕಾಲಘಟ್ಟದಲ್ಲಿ ಹಲವು ದಾಖಲೆಗಳನ್ನ ಬರೆದವರು. ಹೊಸ ಅಲೆಯ ಸಿನಿಮಾಗಳಿಗೆ ಮುದ್ರೆ ಹಾಕಿದವರು ಮತ್ತೆ ಬರ್ತಿದ್ದಾರೆ.
ಅದೇ ಉತ್ಸಾಹ.. ಅದೇ ಹುಮ್ಮಸ್ಸು.. ಅದೇ ಸಿನಿಮಾ ಶಿಸ್ತಿನಲ್ಲಿ.. ಈ ತಲೆಮಾರಿಗೊಂದು ನವ್ಯ ಸಿನಿಮಾ ಕೊಡಲು ಸಜ್ಜಾಗಿದ್ದಾರೆ..ಅವರೇ.. ನಿರ್ದೇಶಕ ಎಸ್ ಮಹೇಂದರ್ ಮತ್ತು ನಾದಬ್ರಹ್ಮ ಹಂಸಲೇಖ.
ಸುಮಾರು 20 ಸಿನಿಮಾಗಳಿಗೆ ಜೊತೆಯಾಗಿ ಕೆಲಸ ಮಾಡಿ, ಸತತ ಗೆಲುವುಗಳನ್ನ ಸಂಭ್ರಮಿಸಿದ್ದ ಇವರು, ಮತ್ತೊಂದು ಹೊಸ ದೃಶ್ಯಕಾವ್ಯಕ್ಕೆ ಕೈ ಜೋಡಿಸಿದ್ದಾರೆ.
ಈ ಸೂಪರ್ ಹಿಟ್ ಕಾಂಬಿನೇಷನ್ ಸಿನಿಮಾಗೆ, ಸುಮಾರು 3 ದಶಕಗಳಿಂದ ಚಿತ್ರರಂಗದ ಒಡನಾಡಿಯಾಗಿದ್ದಂತಹ, ಹಲವು ಸಿನಿಮಾಗಳಿಗೆ ಆರ್ಥಿಕವಾಗಿ ಬೆಂಬಲವಾಗಿ ಬೆನ್ನೆಲುಬಾಗಿ ನಿಂತಿದ್ದ ಕೆ.ಸಿ.ವಿಜಯ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತಿದ್ದಾರೆ.
ಶ್ರೀಗುರುರಾಯರು ಸಿನಿಮಾ ಬ್ಯಾನರ್ ನಡಿಯಲ್ಲಿ ಚಿತ್ರ ಸೆಟ್ಟೇರಲಿದ್ದು, ಇದೇ ತಿಂಗಳ 16ನೇ ತಾರೀಖು ಚಿತ್ರದ ಶೀರ್ಷಿಕೆ ಮತ್ತು ಚಿತ್ರತಂಡದ ಅಧಿಕೃತ ಪರಿಚಯ ಮಾಡಿಕೊಡಲಿದ್ದಾರೆ.
ಇದನ್ನೂ ಓದಿ : ‘ಟಾಕ್ಸಿಕ್’ ವಿಡಿಯೋ ಗ್ಲಿಂಪ್ಸ್ ರಿಲೀಸ್ | ‘ರಾಯ’ನಾಗಿ ವಿಶ್ವರೂಪ ತಾಳಿದ ರಾಕಿಂಗ್ ಸ್ಟಾರ್ ಯಶ್!



















