ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL Recruitment 2025) ಸಂಸ್ಥೆಯಲ್ಲಿ ಖಾಲಿ ಇರುವ 9 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಾಜೆಕ್ಟ್ ಮ್ಯಾನೇಜರ್, ಸೀನಿಯರ್ ಸೈಟ್ ಎಂಜಿನಿಯರ್ ಸೇರಿ ಹಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವಾಕ್-ಇನ್ ಸಂದರ್ಶನಕ್ಕೆ ಹಾಜರಾಗುವುದು, ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಬಿ.ಇ, ಬಿ.ಟೆಕ್, ಬಿಸಿಎ, ಎಂಸಿಎ, ಎಂ.ಕಾಮ್, ಎಂಬಿಎ ಕೋರ್ಸ್ ಗಳನ್ನು ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಹೊಂದಿದವರಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ 70 ಸಾವಿರ ರೂ.ನಿಂದ 2 ಲಕ್ಷ ರೂ.ವರೆಗೆ ಸಂಬಳ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ www.rvnl.org ಗೆ ಭೇಟಿ ನೀಡಬಹುದು.
ಯಾವ ಹುದ್ದೆ ಎಷ್ಟು ಖಾಲಿ?
ಪ್ರಾಜೆಕ್ಟ್ ಮ್ಯಾನೇಜರ್ : 1
ಕ್ವಾಲಿಟಿ ಅಶ್ಯುರನ್ಸ್ ಎಂಜಿನಿಯರ್ : 1
ಚೀಫ್ ಸೇಫ್ಟಿ ಮ್ಯಾನೇಜರ್ : 1
ಸೀನಿಯರ್ ಸೈಟ್ ಎಂಜಿನಿಯರ್ : 1
ಎಸ್ಎಪಿ ಎಂಜಿನಿಯರ್ (ಡೆವಲಪರ್) : 1
ಎಸ್ಎಪಿ ಎಂಜಿನಿಯರ್ (ಫಂಕ್ಷನಲ್ ಕನ್ಸಲ್ಟೆಂಟ್/ಫಿನ್) : 1
ಡಿಜಿಎಂ (ಐಟಿ) : 1
ಡಿಜಿಎಂ (ಎಸ್ & ಟಿ/ಬಿಡಿ) : 1
ಸೀನಿಯರ್ ಎಕ್ಸಿಕ್ಯೂಟಿವ್ (ಐಟಿ) : 1
ಸಂದರ್ಶನದ ದಿನಾಂಕ, ಆಫ್ ಲೈನ್ ಅರ್ಜಿ ವಿವರ
- ವಾಕ್-ಇನ್ ಸಂದರ್ಶನ
ಪ್ರಾಜೆಕ್ಟ್ ಮ್ಯಾನೇಜರ್, ಕ್ವಾಲಿಟಿ ಅಶ್ಯುರನ್ಸ್ ಎಂಜಿನಿಯರ್ ಹುದ್ದೆಗಳಿಗೆ
ದಿನಾಂಕ: ಆಗಸ್ಟ್ 22ರಂದು ಬೆಳಗ್ಗೆ 10
ಸ್ಥಳ: ರೈಲ್ ವಿಕಾಸ್ ನಿಗಮ್ ಲಿಮಿಟೆಡ್, ಅಹಾರಿಕಾ, ಗ್ರೌಂಡ್ ಫ್ಲೋರ್, ಆಗಸ್ಟ್ ಕ್ರಾಂತಿ ಭವನ, ಭಿಕಾಜಿ ಕಮಾ ಪ್ಲೇಸ್, ಆರ್.ಕೆ.ಪುರಂ, ನವದೆಹಲಿ-110066 - ಆಫ್ ಲೈನ್ ಮೂಲಕ ಹೀಗೆ ಅರ್ಜಿ ಸಲ್ಲಿಸಿ
(ಸೀನಿಯರ್ ಸೈಟ್ ಎಂಜಿನಿಯರ್, ಡಿಜಿಎಂ, SAP ಎಂಜಿನಿಯರ್ ಹುದ್ದೆಗಳು):
- ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಸ್ವ-ಸಹಿ ಸಹಿತ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ಇಲ್ಲಿದೆ ವಿಳಾಸ
ಡಿಸ್ಪ್ಯಾಚ್ ಸೆಕ್ಷನ್, ಗ್ರೌಂಡ್ ಫ್ಲೋರ್, ಆಗಸ್ಟ್ ಕ್ರಾಂತಿ ಭವನ, ಭಿಕಾಜಿ ಕಮಾ ಪ್ಲೇಸ್, ಆರ್.ಕೆ.ಪುರಂ, ನವದೆಹಲಿ-110066
ಕೊನೆಯ ದಿನಾಂಕ: ಸೆಪ್ಟೆಂಬರ್ 10

















