ಕೋಲಾರ: ಕೋಲಾರ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ನಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕಿ ರೂಪಾ ಶಶಿಧರ್ ರೋಷಾವೇಷಗೊಂಡಿದ್ದಾರೆ.
ಮಾಜಿ ಸಚಿವ ರಮೇಶ್ ಕುಮಾರ್ ಅಂಡ್ ಟೀಂ ಶಾಸಕರ ವಿರುದ್ದ ಶಾಸಕಿ ಕೆಂಡಾಮಂಡಲವಾಗಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆ ಹಾಗೂ ಕೋಮುಲ್ ಚುನಾವಣೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಜಿಲ್ಲೆಯ ಮಾನ, ಮರ್ಯಾದೆ ಹರಾಜು ಹಾಕುವುದರಲ್ಲಿ ಪ್ರಭಾವಿಗಳು ಮುಂಚೂಣಿಯಲ್ಲಿರುತ್ತಾರೆ. ಜಿಲ್ಲೆಯ ರೈತರ ಸಂಸ್ಥೆಗಳನ್ನು ಉಳಿಸಲು, ಬಡವರ ಸಂಸ್ಥೆ ಉಳಿಸಲು ಪ್ರಭಾವಿ ರಾಜಕಾರಣಿಗಳು ಎಷ್ಟು ಸಕ್ರಿಯವಾಗಿ ಇರುತ್ತಾರೆ? ಎಷ್ಟು ಚೆನ್ನಾಗಿ ಕಾಪಾಡಿದ್ದಾರೆ?
ಯಾರು ಎಷ್ಟು ಕಣ್ಣೀರು ಹಾಕಿದ್ದಾರೆ? ಎಂಬುವುದು ಗೊತ್ತು.
ಕೋಲಾರ ಜಿಲ್ಲೆಗೆ ರಾಜಕೀಯ ಅಸೂಹೆಯಿಂದ ಕೆಟ್ಟ ಪರಿಸ್ಥಿತಿ ಬಂದಿದೆ. ಇವರ ಮುಂದೆ ಯಾರು ಬೆಳೆಯಬಾರದಾ? ಯಾರು ಎದುರು ನಿಲ್ಲಬಾರದಾ? ಜನರು ಆಶೀರ್ವಾದ ಮಾಡಿದ ಮೇಲೆ? ಅಷ್ಟೊಂದು ಅಸೂಹೆ, ಹಿಂಸೆ ಯಾಕೆ? ಅವರನ್ನೆಲ್ಲ ದೇವರೇ ರಕ್ಷಿಸಬೇಕು ಎಂದಿದ್ದಾರೆ.
ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ್ದು ಡಿಸಿಸಿ ಬ್ಯಾಂಕ್. ನನ್ನ ರಾಜಕೀಯವಾಗಿ ಸೋಲಿಸಿ, ತುಳಿದು ಹಾಕಿದ್ದರು. ನನ್ನ ಬೆಳೆಸಿದ ಡಿಸಿಸಿ ಬ್ಯಾಂಕ್, ನಂಗೆ ದೇಗುಲ ಇದ್ದಂತೆ, ನೂರು ತಪ್ಪಾದರು ನಾನು ದೇಗುಲ ಉಳಿಸಬೇಕು. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಆದರೆ, ಜಿಲ್ಲೆಗೆ ಅನ್ಯಾಯ ಹಾಗೂ ಅಪಮಾನವಾಗಬಾರದು ಎಂದಿದ್ದಾರೆ.