ಶಿವಮೊಗ್ಗ : ಮಧ್ಯಪ್ರಾಚ್ಯದ ಯುದ್ದ ಹಿನ್ನೆಲೆ ಜಿಲ್ಲೆಯ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಕೊರತೆ ಕುರಿತು ವದಂತಿ ಹರಡಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿರುವ ಮೂರು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖಾಲಿಯಾದ ಹಿನ್ನೆಲೆಯಲ್ಲಿ ಈ ವದಂತಿಗೆ ಬಲ ಬಂದಿದೆ. ಇದರಿಂದ ಇಂಧನ ಲಭ್ಯವಿದ್ದ ಹೆಚ್‌ಪಿ ಪೆಟ್ರೋಲ್ ಬಂಕ್‌ಗೆ ಜನರು ಮುಗಿಬಿದ್ದು ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಗೆ ಹರಸಾಹಸ ಪಡುತ್ತಿದ್ದಾರೆ.
ವಾಹನಗಳ ಜೊತೆಗೆ ಖಾಲಿ ಬಾಟಲ್‌ಗಳು ಹಾಗೂ ಕ್ಯಾನ್‌ಗಳನ್ನು ತಂದ ಜನರು ಉದ್ದ ಸಾಲಿನಲ್ಲಿ ನಿಂತು ಇಂಧನ ಸಂಗ್ರಹಿಸಿಕೊಂಡ ದೃಶ್ಯಗಳು ಕಂಡುಬಂದವು. ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣವೂ ನಿರ್ಮಾಣವಾಗಿತ್ತು.
ಆದರೆ, ವದಂತಿ ಹರಡಿದ ಬೆನ್ನಲ್ಲೇ ಬಂಕ್ ಮಾಲೀಕರು ಸ್ಪಷ್ಟನೆ ನೀಡಿ, ಇಂಧನ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಸರಬರಾಜು ಸಾಮಾನ್ಯವಾಗಿಯೇ ಮುಂದುವರಿಯುತ್ತಿದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ :ಹಿಂದೂ ಮಹಾಸಾಗರಕ್ಕೆ ವ್ಯಾಪಿಸಿದ ಯುದ್ಧದ ಕಿಚ್ಚು.. ಅಮೆರಿಕ-ಬ್ರಿಟನ್ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ!



















