ಬೆಂಗಳೂರು : ಕಿರಿಯ ವಯಸ್ಸಿನ ಹುಡುಗಿ ಸಂಬಂಧ ಜಗಳ ನಡೆದಿದ್ದು, ಈ ಗಲಾಟೆ ತಡೆಯಲು ಹೋದ ಆಟೋ ಚಾಲಕ ರೋಷನ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆದ ಘಟನೆ ಕೆಆರ್ ಪುರದಲ್ಲಿ ಸಂಭವಿಸಿದೆ.
ಘಟನೆಯು ಫೆಬ್ರವರಿ 1 ರ ರಾತ್ರಿ 8:15ಕ್ಕೆ, ಕೆಆರ್ ಪುರದ ದೇವಸಂದ್ರ ಸಮೀಪದ ಮದೀನಾ ಮಸೀದಿ ರಸ್ತೆಯಲ್ಲಿ ನಡೆದಿದೆ. ವಾಸಿಂ, ಯಾಸಿಫ್, ಖಲೀಮ್ ಮತ್ತು ಇನ್ನಿತರರು, ಆಟೋ ಚಾಲಕ ರೋಷನ್ ಅವರ ಕುತ್ತಿಗೆಯಲ್ಲಿ ಗಂಭೀರ ಗಾಯ ಮಾಡಿ ಪರಾರಿಯಾಗಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆ ಪಡೆದ ರೋಷನ್ ನಂತರ ಆಲ್ಟರ್ ಹಾಸ್ಪಿಟಲ್‌ಗೆ ದಾಖಲಾಗಿ ನಿರಂತರ ಚಿಕಿತ್ಸೆಯನ್ನು ಪಡೆದಿದ್ದಾರೆ. ಘಟನೆ ಕುರಿತು ಕೆಆರ್ ಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸುಮಾರು 25ಕ್ಕಿಂತ ಹೆಚ್ಚು ಲೋಡ್ ಅಡಿಕೆ ಸಿಪ್ಪೆಗೆ ಬೆಂ ಹಚ್ಚಿದ ಕಿಡಿಗೇಡಿಗಳು | ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ *



















