ಬೆಂಗಳೂರು : RSSಗೆ ನೂರಾರು ಸಿದ್ದರಾಮಯ್ಯರನ್ನು ಎದುರಿಸುವ ಶಕ್ತಿ ಇದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಆರ್‌ಎಸ್‌ಎಸ್‌ಗೆ ಇಂತಹ ನೂರಾರು ಖರ್ಗೆ, ಸಿದ್ದರಾಮಯ್ಯರನ್ನು ಎದುರಿಸುವ ಶಕ್ತಿ ಇದೆ. ದೇಶದ ಪ್ರಧಾನಿ ನೆಹರೂ ಅವರನ್ನೇ ಎದುರಿಸಿರುವಾಗ ಇವ್ರು ಯಾರೋ ಔಟ್ ಗೋಯಿಂಗ್ ಸಿಎಂಗೆ ಹೆದರೋಕೆ ಆಗುತ್ತಾ? ಅಂತ ಕಾಲೆಳಿದಿದ್ದಾರೆ.
ಮೋದಿ ನೋಡಿದಷ್ಟು ಒಳ್ಳೆಯವರಲ್ಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್ ಅಶೋಕ್ ಅವರು, ನೀವು ಅದಕ್ಕಿಂತ ಕೆಟ್ಟವರು. ನಾನೇ ದುಡ್ಡು ಕೊಟ್ಟು ನಾನೇ ಉದ್ಘಾಟನೆ ಮಾಡಿದ್ದೇನೆ ಅಂತಾ ಒಂದು ಉದಾಹರಣೆ ಕೊಡಿ. ಮೋದಿ ಅಂದರೆ ಅಭಿವೃದ್ಧಿ. ಕೆಲವು ದೇಶದವರಂತೂ ಕೋವಿಡ್ ಸಮಯದಲ್ಲಿ ಮೋದಿ ಕಾಲಿಗೆ ಬಿದ್ದಿದ್ದಾರೆ. ಮೋದಿಗೆ ಬೈದರೆ ನಮ್ಮ ಲೆವೆಲ್ ಜಾಸ್ತಿ ಆಗುತ್ತದೆ ಅಂತಾ ಅಷ್ಟೇ ಇವರದ್ದು. ಮೋದಿ ಲೆವೆಲ್ ಅವರದ್ದೇ, ನಿಮ್ಮ ಲೆವಲ್ ನಿಮ್ಮದೇ ಅಂತ ಟಾಂಗ್ ಕೊಟ್ಟಿದ್ದಾರೆ.
ಸಂಸದ ತೇಜಸ್ವಿ ಸೂರ್ಯನ ಅಮಾವಾಸ್ಯೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನ ತಾನೇ ಹೇಳಬೇಕು ಯಾರ ಮುಖದಲ್ಲಿ ತೇಜಸ್ಸಿದೆ, ಅಮಾವಾಸ್ಯೆ ಯಾರು ಎಂದು? ರಸ್ತೆಗುಂಡಿ ನೋಡಿದ್ರೆ ಗೊತ್ತಾಗುತ್ತೆ. ಯಾರು ಅಮವಾಸ್ಯೆ ಪೌರ್ಣಮಿ ಎಂದು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ, ಬೆಂಗಳೂರಿನ ರಸ್ತೆ ನೋಡಿದ್ರೆ ಗೊತ್ತಾಗುತ್ತೆ ಅಂತ ಛೇಡಿಸಿದ್ದಾರೆ.