ಬೆಳಗಾವಿ : ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ರಾಜಕೀಯ ಸಂಘಟನೆಯೇ ಹೊರತು, ಸಾಮಾಜಿಕ ಸಂಘಟನೆಯಾಗಿರದ ಕಾರಣ ಸರ್ಕಾರಿ ನೌಕರರು ಭಾಗವಹಿಸಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೋಂದಿಗೆ ಮಾತನಾಡಿದ ಗುಂಡುರಾವ್, ಪ್ರಿಯಾಂಕ್ ಖರ್ಗೆಬರೆದಿರುವ ಪತ್ರ ಸರಿಯಾಗಿದೆ. ಆರ್‌ಎಸ್‌ಎಸ್‌ನ್ನು ಅಧಿಕೃತವಾಗಿ ನಿಷೇಧಿಸಬೇಕು. ರಾಜಕೀಯ ಸಂಘಟನೆಯ ಚಟುವಟಿಕೆಗೆ ಸರ್ಕಾರಿ ಜಾಗದಲ್ಲಿ ಅನುಮತಿ ನೀಡಬಾರದು ಎಂದಿದ್ದಾರೆ.
ಸರ್ಕಾರಗಳನ್ನು ತೆಗೆಯುವಲ್ಲಿ, ಸರ್ಕಾರ ರಚನೆ ಮಾಡುವಲ್ಲಿ, ಮಂತ್ರಿ ಮಂಡಳ ರಚನೆಯಲ್ಲಿ ಆರ್‌ಎಸ್‌ಎಸ್ ನಾಯಕರು ಭಾಗಿಯಾಗುತ್ತಾರೆ. ಚುನಾವಣೆಯಲ್ಲೂ ಸಂಘದ ನಾಯಕರು ಸ್ಪರ್ಧಿಸುತ್ತಾರೆ. ಈ ಕಾರಣಕ್ಕೆ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ.