ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಇಂದು ಕೋಮುಗಲಭೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಸುಟ್ಟುಹೋಗಿರುವ ಅಂಗಡಿಗಳ ಬಳಿ ಪರಿಶೀಲಿಸಿದರು. ನಂತರ ಅಂಗಡಿ ಮಾಲೀಕರ ಜೊತೆ ಮಾತುಕತೆ ನಡೆಸಿ, ಮಾಹಿತಿ ಕಲೆ ಹಾಕಿದರು. ವಾಹನಗಳು ಸುಟ್ಟುಹೋಗಿರುವುದನ್ನು ಪರಿಶೀಲಿಸಿದರು. ಅಲ್ಲದೇ, ಈ ಸಂದರ್ಭದಲ್ಲಿ ಪರಿಹಾರದ ಮೊತ್ತವನ್ನು ವಿತರಿಸಿದರು.
ಆಸ್ತಿಪಾಸ್ತಿ ಕಳೆದುಕೊಂಡವರಿಗೆ ತಲಾ 25 ಸಾವಿರ ರೂಪಾಯಿಯಿಂದ 2 ಲಕ್ಷ ರೂಪಾಯಿ ವರೆಗೂ ಪರಿಹಾರ ವಿತರಣೆ ಮಾಡಿದರು. ನಷ್ಟ ಆಧರಿಸಿ ಪರಿಹಾರ ವಿತರಣೆ ಮಾಡಿದರು. ಮಾಜಿ ಶಾಸಕ ಸುರೇಶ್ ಗೌಡರ ಮನೆಗೆ ಕರೆಸಿ ಪರಿಹಾರ ವಿತರಣೆ ಮಾಡಿದರು.
ಗಲಾಟೆಯಲ್ಲಿ ಹಾನಿಯಾದ ಅಂಗಡಿ ಮಾಲೀಕರಿಗೆ ಪರಿಹಾರ ನೀಡುತ್ತಿದ್ದೇನೆ. ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುತ್ತೇನೆ ಎಂದಿದ್ದಾರೆ. ಬಂಧನಕೊಳಗಾದವರ ಕುಟುಂಬಸ್ಥರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು. ಪೊಲೀಸರು ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವಿಡಿಯೋದಲ್ಲಿ ಇಲ್ಲ ಅಂದರೆ ಮರಳಿ ಕಳುಹಿಸುತ್ತೇವೆ ಅಂದಿದ್ದರು. ಆದರೆ, ಮರಳಿ ಕಳಿಸಿಲ್ಲ ಎದು ಮಹಿಳೆಯರು ನೋವು ವ್ಯಕ್ತಪಡಿಸಿದ್ದಾರೆ.