ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಎನ್ನುವವರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಮಂಡಳಿಯು 312 ಹುದ್ದೆಗಳ ನೇಮಕಾತಿಗಾಗಿ (RRB Isolated Categories Recruitment 2026) ಅಧಿಸೂಚನೆ ಹೊರಡಿಸಿದೆ. 312 ಐಸೊಲೇಟೆಡ್ ಕೆಟಗರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೂಡಲೇ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ ಹೆಸರು : ರೈಲ್ವೆ ನೇಮಕಾತಿ ಮಂಡಳಿ ( RRB )
ಒಟ್ಟು ಹುದ್ದೆಗಳ ಸಂಖ್ಯೆ: 312
ಉದ್ಯೋಗ ಸ್ಥಳ: ದೇಶಾದ್ಯಂತ
ಹುದ್ದೆ ಹೆಸರು: ಸೀನಿಯರ್ ಪಬ್ಲಿಸಿಟಿ ಇನ್ಸ್ ಪೆಕ್ಟರ್ ಇತ್ಯಾದಿ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 31
ಯಾವ ಹುದ್ದೆ ಎಷ್ಟು ಖಾಲಿ?
ಚೀಫ್ ಲಾ ಅಸಿಸ್ಟಂಟ್ : 22
ಪಬ್ಲಿಕ್ ಪ್ರಾಸಿಕ್ಯೂಟರ್: 07
ಜೂನಿಯರ್ ಹಿಂದಿ ಟ್ರಾನ್ಸ್ ಲೇಟರ್ : 202
ಸೀನಿಯರ್ ಪಬ್ಲಿಸಿಟಿ ಇನ್ಸ್ ಪೆಕ್ಟರ್: 15
ಸ್ಟಾಫ್ ಆ್ಯಂಡ್ ವೆಲ್ ಫೇರ್ ಇನ್ಸ್ ಪೆಕ್ಟರ್: 24
ಲ್ಯಾಬ್ ಅಸಿಸ್ಟಂಟ್: 39
ಸೈಂಟಿಫಿಕ್ ಅಸಿಸ್ಟಂಟ್: 02
ಸೈಂಟಿಫಿಕ್ ಸೂಪರ್ ವೈಸರ್: 01
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಎಲ್ ಎಲ್ ಬಿ, ಪಿಯುಸಿ, ಐಟಿಐ ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕನಿಷ್ಠ 18ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಜನರಲ್ ಅಭ್ಯರ್ಥಿಗಳಿಗೆ 500 ರೂಪಾಯಿ ಹಾಗೂ ಒಬಿಸಿಯವರಿಗೆ 250 ರೂಪಾಯಿ ಅರ್ಜಿ ಶುಲ್ಕವಿದೆ. ಕಂಪ್ಯೂಟರ್ ಆಧಾರಿತ ಟೆಸ್ಟ್, ದಾಖಲೆ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 44,900 ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವವರು rrbcdg.gov.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ : ನಿಮ್ಮ ಬಿಪಿ ಬಗ್ಗೆ ಎಚ್ಚರಿಸುತ್ತೆ ಆ್ಯಪಲ್ ವಾಚ್ : ಭಾರತದ ನಂತರ ಈಗ 7 ಹೊಸ ದೇಶಗಳಿಗೂ ವಿಸ್ತರಣೆ


















