ಬೆಂಗಳೂರು : ರಾಯ್ ಅವರ ಅಂತಿಮ ಸಂಸ್ಕಾರಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಈಗಾಗಲೇ ರಾಯ್ ಅವರ ಮೃತದೇಹವನ್ನು ಇಡುವುದಕ್ಕಾಗಿ ಕಾಫಿನ್ ಬಾಕ್ಸ್ ಸಿದ್ಧಪಡಿಸಲಾಗಿದೆ.

ರಾಯ್ ಮೃತದೇಹವನ್ನು ಕಾಫಿನ್ ಬಾಕ್ಸ್‌ನಲ್ಲಿ ಇರಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ. ಚರ್ಚ್‌ನಲ್ಲಿ ಪ್ರಾರ್ಥನಾ ವಿಧಿ ಮುಗಿದ ಬಳಿಕ, ಅನಂತ ಅಂತ್ಯ ಸಂಸ್ಕಾರ ಕಾರ್ಯಕ್ರಮ ನಡೆಯಲಿದೆ.

ನಂತರ ಸಿಮೆಟ್ರಿಯಲ್ಲಿ ಗುಂಡಿಯ ಬಳಿ ಚರ್ಚ್ ಫಾದರ್ ಅವರಿಂದ ವಿಶೇಷ ಪ್ರಾರ್ಥನೆ ನಡೆಯಲಿದ್ದು, ಅನಂತರ ಕಾಫಿನ್ ಬಾಕ್ಸ್ ಅನ್ನು ಗುಂಡಿಯಲ್ಲಿ ಇಟ್ಟು ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಕ್ರೈಸ್ತ ಸಂಪ್ರದಾಯದಂತೆ ನಡೆಯಲಿರುವ ಈ ಅಂತಿಮ ಸಂಸ್ಕಾರದಲ್ಲಿ, ಕಾಫಿನ್ ಬಾಕ್ಸ್ ಅನ್ನು ಗುಂಡಿಯೊಳಗೆ ಇಟ್ಟು ಮಣ್ಣು ಹಾಕುವ ಮೂಲಕ ರಾಯ್ ಅವರಿಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಬಂಧುಗಳು ಅಂತಿಮ ವಿದಾಯ ಸಲ್ಲಿಸಲಿದ್ದಾರೆ.
ಇದನ್ನೂ ಓದಿ : ಸಿಜೆ ರಾಯ್ ಅಂತಿಮ ದರ್ಶನ ಪಡೆದ ಕುಟುಂಬಸ್ಥರು | ಮಗನ ಮೃತದೇಹದ ಮುಂದೆ ಗೋಳಾಡಿದ ರಾಯ್ ತಾಯಿ


















