ಬೆಂಗಳೂರು : ಸುಮಾರು 17 ವರ್ಷಗಳಿಂದ ನಾವು ರಾಯ್ ಜೊತೆ ಇದ್ವಿ, ಒಳ್ಳೆ ಬುದ್ಧಿವಂತ, ಕಷ್ಟ ಅಂದವರಿಗೆ ಬೇಗ ಸ್ಪಂದಿಸುವ ವ್ಯಕ್ತಿ ಎಂದು ಉದ್ಯಮಿ ಸಿ ಜೆ ರಾಯ್ ನೆನೆದು ಬಂಗಾರಪೇಟೆ ಶಾಸಕ ವೈ.ಎ ನಾರಾಯಣ ಸ್ವಾಮಿ ಸಂತಾಪ ಸೂಚಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಶಾಸಕ ವೈ.ಎ ನಾರಾಯಣ ಸ್ವಾಮಿ, ಕೋಲಾರ ಜಿಲ್ಲೆ ಭಾಗದಲ್ಲಿ ಗಾಲ್ಫ್ ಕೋರ್ಸ್ ಅನ್ನ ಮಾಡಿದ್ರು, 1 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದಾರೆ. ಸಿ.ಜೆ ರಾಯ್ ಅವರು ಅಜಾತ ಶತ್ರು ಯಾರಿಗೂ ಕೆಟ್ಟದನ್ನ ಬಯಸಿದ ವ್ಯಕ್ತಿ ಅಲ್ಲ ಬಿಸಿನೆಸ್ ಅಲ್ಲಿ ಒಳ್ಳೆ ವಿಚಾರ ಇರುವ ವ್ಯಕ್ತಿನಾವು ಈಗ ಆ ಸಂಸ್ಥೆ ಬಿಟ್ಟಿರಬಹುದು ಆದರೆ ಅವರಜೋತೆ ಇರುವ ನಂಟು ಹಾಗೆ ಇದೆ ಎಂದು ರಾಯ್ ಅವರೊಂದಿಗಿನ ನಂಟನ್ನು ತೋರಿಕೊಂಡರು.
ರಾಯ್ ಇವತ್ತು ಇಲ್ಲ ಅನ್ನೋದು ಬಹಳ ನೋವಾಗುತ್ತೆ. ರಾಜ್ಯಕ್ಕೆ ದೇಶಕ್ಕೆ ಇವರು ಆಸ್ತಿ ಇದ್ದಂತೆ. ಇವರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗ್ತಿತ್ತು. ನಮಗೆ ಬಹಳ ಮನಸಿಗೆ ನೋವಾಗಿದೆ. ಒಂದು ಅಮೂಲ್ಯವಾದ ರತ್ನವನ್ನು ಕಳೆದು ಕೊಂಡಿದ್ದೇವೆ. ಭಗವಂತ ಅವರಿಗೆ ಒಳ್ಳೆ ಚಿರಶಾಂತಿ ಕೊಡಲಿ. ಸರ್ಕಾರ ಎಸ್ ಐಟಿ ರಚನೆ ಮಾಡಿರೋದು ಸ್ವಾಗತ ಗೃಹಮಂತ್ರಿಗಳು ಒಳ್ಳೆ ನಿರ್ಧಾರ ತಗೊಂಡಿದ್ದಾರೆ. ಕಾದು ನೋಡೋಣ ಸತ್ಯಾಸತ್ಯತೆಗಳು ಗೊತ್ತಾಗುತ್ತೆ ಎಂದು ದುಃಖ ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ರಾಯ್ ನೆಚ್ಚಿನ ತಾಣದಲ್ಲೇ ಅಂತಿಮ ಸಂಸ್ಕಾರ | ಬತ್ತಿ ಹೋದ ಕುಟುಂಬಸ್ಥರ ಕಣ್ಣೀರು



















