ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಬೆಂಗಳೂರು

ಜಲಮಂಡಳಿ ವಿರುದ್ದ ಸಾಲು ಸಾಲು ಅಕ್ರಮ ಆರೋಪ – ಹೋರಾಟಕ್ಕೆ ಸಜ್ಜಾದ KRS ಪಕ್ಷ!

March 24, 2026
Share on WhatsappShare on FacebookShare on Twitter

ಬೆಂಗಳೂರು | ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿರುವ ಜಲಮಂಡಳಿಯಲ್ಲಿ (BWSSB) ನಡೆಯುತ್ತಿರುವ ಅಕ್ರಮ ಮತ್ತು ಭಾರೀ ಭ್ರಷ್ಟಾಚಾರದ ವಿರುದ್ದ KRS ಪಕ್ಷ ಸಿಡಿದೆದ್ದಿದೆ. ಜಲಮಂಡಳಿಯು ಬೆಂಗಳೂರಿಗರಿಂದ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಸರ್ಕಾರಿ ಸಂಸ್ಥೆಯಲ್ಲಿ ನಡೆಯುವ ಅಕ್ರಮಗಳಿಗೆ ಯಾವುದೇ ಕಡಿವಾಣವೇ ಇಲ್ಲದಂತಾಗಿದೆ. ಇದೀಗ ಇವುಗಳ ವಿರುದ್ಧ ಕೆಆರ್‌ಎಸ್ ಪಕ್ಷವು ಬೃಹತ್‌ ಹೋರಾಟಕ್ಕೆ ಸಜ್ಜಾಗಿದೆ. ಇಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಕೆಆರ್‌ಎಸ್‌ ಪಕ್ಷ, ಜಲಮಂಡಳಿಯ ಸಾಲು ಸಾಲು ಅಕ್ರಮ ಮತ್ತು ಭ್ರಷ್ಟಾಚಾರವನ್ನು ಬಯಲಿಗೆಳೆದಿದೆ.

ಜಲಮಂಡಳಿ ವಿರುದ್ದದ ಗಂಭೀರ ಆರೋಪಗಳು

ಜಲಮಂಡಳಿಯು ಬಳಕೆದಾರರಿಗೆ BCC (Beneficiary Capital Contribution Charges) ಶುಲ್ಕಗಳನ್ನು ವಿಧಿಸಿ ಡಿಮಾಂಡ್ ನೋಟಿಸ್ ಹೊರಡಿಸುತ್ತಿದೆ. ಈ BCC ಶುಲ್ಕದ ವಿರುದ್ಧ ಕೆಲವು ನಾಗರಿಕರು ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ, ಅದು ಕಾನೂನು ಬಾಹಿರ ಎಂದು ಆದೇಶ ಪಡೆದಿದ್ದಾರೆ. ಇನ್ನು ಈ ಆದೇಶಗಳಲ್ಲಿ ಸ್ಪಷ್ಟವಾಗಿ ಈ BCC ಶುಲ್ಕಗಳು ಕಾನೂನು ಬಾಹಿರ ಮತ್ತು ಇವುಗಳನ್ನು ನಿಗದಿತ ಸಮಯದ ಒಳಗೆ ಬಳಕೆದಾರರಿಗೆ ಮರು ಪಾವತಿ ಮಾಡಬೇಕು ಎಂದು ಆದೇಶಿಸಲಾಗಿದೆ. 2018ರಿಂದ ಇತ್ತೀಚಿನವರೆಗೂ ಹಲವಾರು ಪ್ರಕರಣಗಳು [ಪ್ರಕರಣ ಸಂಖ್ಯೆ WP 27589/2024 (GM-BWSSB), WP 18685/2021 (GM-BWSSB), WP 35389/2018 (GM-BWSSB), WP 20016/2021 (GM-BWSSB)] ಇತ್ಯರ್ಥವಾಗಿ ಆದೇಶವಾಗಿರುತ್ತದೆ. ಇಲ್ಲಿಯವರೆಗೂ ಜಲ ಮಂಡಳಿಯು ಈ ಪ್ರಕರಣದ ಯಾವುದೇ ದೂರುದಾರರಿಗೆ ಹಣ ಮರು ಪಾವತಿಮಾಡಿರುವುದಿಲ್ಲ ಮತ್ತು ಇಂದೂ ಕೂಡಾ ಈ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಕಾನೂನು ಬಾಹಿರ ಶುಲ್ಕವನ್ನು ಹೆಸರಿನಲ್ಲಿ ಇದುವರೆಗೂ ಸಾವಿರಾರು ಕೋಟಿ ರೂಪಾಯಿಗಳನ್ನು ಬೆಂಗಳೂರಿಗರಿಂದ ಜಲಮಂಡಳಿ ವಸೂಲಿ ಮಾಡಿದೆ ಎಂದು KRS ಪಕ್ಷ ಆರೋಪಿಸಿದೆ.

ಇನ್ನು, ಹಳೆ ಕಟ್ಟಡ ಬೀಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಳಕೆದಾರರು ಬಳಸುತ್ತಿರುವ ತಾತ್ಕಾಲಿಕ ಸಂಪರ್ಕವನ್ನು ಕಟ್ಟಡ ಪೂರ್ಣವಾದ ಮೇಲೆ ಅಧಿಕೃತಗೊಳಿಸದೇ ಇರುವ ಸಂದರ್ಭದಲ್ಲಿ ತಿಂಗಳ ಬಿಲ್‌ಗಳಲ್ಲಿ, ದಂಡದ ಮೊತ್ತ 2,500 ರೂಗಳನ್ನು ವಿಧಿಸಿ ಸಂಗ್ರಹಿಸಬೇಕು ಎಂದು ಒಂದು ವರ್ಷದ ಹಿಂದೆ ಜಲ ಮಂಡಳಿಯು ಆದೇಶಿಸಿ ಸುತ್ತೋಲೆಯನ್ನು ಹೊರಡಿಸಿದೆ. ಆ ಸುತ್ತೋಲೆಯಲ್ಲಿ ಈ ದಂಡದ ಮೊತ್ತವನ್ನು ಪ್ರತಿ ತಿಂಗಳ ಬಿಲ್‌ನ ಮೂಲಕ ಸಂಗ್ರಹಿಸಬೇಕೆಂದು ತಿಳಿಸಲಾಗಿದೆ. ಆದರೆ, ಅಂದಿನಿಂದ ಇಂದಿನವರೆಗೂ ಈ ದಂಡದ ಮೊತ್ತವನ್ನು ಮಾಸಿಕ ಬಿಲ್‌ ವಿಧಿಸಿರುವುದಿಲ್ಲ. ಈಗ ಏಕಾಏಕಿ ಬಳಕೆದಾರರಿಗೆ ಯಾವುದೇ ಮಾಹಿತಿಯನ್ನು ನೀಡದೇ ಕಳೆದ ಒಂದು ವರ್ಷದ ದಂಡವನ್ನು ಪಾವತಿಸಬೇಕೆಂದು ಡಿಮಾಂಡ್ ನೋಟಿಸ್ ಹೊರಡಿಸಲಾಗಿದೆ. ಈ ದಂಡದ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಸಾರ್ವಜನಿಕರು ಸಾವಿರಾರು, ಲಕ್ಷಾಂತರ ರೂಪಾಯಿಗಳನ್ನು ಕಕ್ಕುವಂತೆ ದೌರ್ಜನ್ಯ ಎಸಗುತ್ತಿದೆ.

ಹಾಗೆಯೇ ಹೊಸ ಕನೆಕ್ಷನ್ ಪಡೆದುಕೊಳ್ಳುವ ಬಳಕೆದಾರರಿಗೆ ಮೀಟರ್ ಅಳವಡಿಕೆ (ಫಿಕ್ಸಿಂಗ್) ಶುಲ್ಕವನ್ನು ಜಲ ಮಂಡಳಿ ವಿಧಿಸುತ್ತಿದೆ. ಆದರೆ, ಜಲ ಮಂಡಳಿಯು ಇದುವರೆಗೂ ಯಾರೊಬ್ಬರಿಗೂ ನೇರವಾಗಿ ಮೀಟರ್ ಅಳವಡಿಸಿರುವುದಿಲ್ಲ. ಅದನ್ನು ಸಂಪೂರ್ಣವಾಗಿ ಗುತ್ತಿಗೆದಾರರು ಅಥವಾ ಮನೆಯ ಮಾಲೀಕರು ತಮ್ಮ ಹಣ ವ್ಯಯಿಸಿ ಮಾಡಿಸಿಕೊಳ್ಳುತ್ತಾರೆ. ಜಲ ಮಂಡಳಿಯ ಬಳಿ ಇದನ್ನು ನಿರ್ವಹಿಸುವ ಯಾವುದೇ ಪ್ಲಂಬರ್ ಇರುವುದಿಲ್ಲ. ಅರ್ಜಿಯನ್ನು ನೋಡುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನು ಗುತ್ತಿಗೆದಾರರು ನಿರ್ವಹಿಸುತ್ತಾರೆ. ಈ ಮೀಟರ್ ಫಿಕ್ಸಿಂಗ್ ಶುಲ್ಕವನ್ನು ಅವರು ಕಂಟ್ರಾಕ್ಟರ್ಗಳಿಗೂ ನೀಡುವುದಿಲ್ಲ. ಮೀಟರ್ ಫಿಕ್ಸಿಂಗ್‌ನ ಸೇವೆಯನ್ನು ಒದಗಿಸದೇ ಇದ್ದರೂ ಪ್ರತಿಯೊಬ್ಬ ಬಳಕೆದಾರರಿಂದ ಈ ಶುಲ್ಕವನ್ನು ಜಲ ಮಂಡಳಿಯು ವಸೂಲಿ ಮಾಡುತ್ತಿದೆ ಎನ್ನಲಾಗಿದೆ.

ಜಲ ಮಂಡಳಿಯು ಕೆಳ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳು ಪ್ರತಿನಿತ್ಯ ಭ್ರಷ್ಟಾಚಾರ ಮಾಡುವುದರಲ್ಲಿ ಮುಳುಗಿದ್ದಾರೆ. 7 ವರ್ಷಕ್ಕೊಮ್ಮೆ ಮೀಟರ್‌ಗಳಳನ್ನು ಉಚಿತವಾಗಿ ಬದಲಾಯಿಸುವ ನಿಯಮ ಇದ್ದರೂ ಮೀಟರ್ ಬದಲಾವಣೆಗೆಂದು ಸಾವಿರಾರು ರೂಪಾಯಿಗಳನ್ನು ಬೆಂಗಳೂರಿನ ನಾಗರಿಕರಿಂದ ವಸೂಲಿ ಮಾಡುತ್ತಿರುವ ಆರೋಪವೂ ಕೇಳಿಬಂದಿದೆ. ಸಾರ್ವಜನಿಕರಿಂದ ಲಂಚ ಪಡೆದು ಮೀಟರ್ ರೀಡಿಂಗ್ ನಲ್ಲಿ ತಪ್ಪು ಮಾಹಿತಿಗಳನ್ನು ನೀಡಿ ಸಂಸ್ಥೆಗೆ ನಷ್ಟ ಉಂಟು ಮಾಡುತ್ತಿದ್ದು, ಹೊಸ ಸಂಪರ್ಕಗಳು ಕಂಟ್ರಾಕ್ಟರ್‌ಗಳ ಮೂಲಕ ಬರಬೇಕೆಂದು ನಿಯಮ ಇದ್ದರೂ ಅದನ್ನು ಇಂಜಿನಿಯರ್‌ಗಳು ತಾವೇ 1000, 2000 ಪಡೆದುಕೊಂಡು ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.

ಹೀಗೆ ಭ್ರಷ್ಟಾಚಾರ ಮತ್ತು ಅಕ್ರಮಗಳಿಂದ ಜಲಮಂಡಳಿಯು ನಾಗರಿಕರ ಸಂಸ್ಥೆಯಾಗಿ ಉಳಿಯದೇ, ದಂಧೆ ಮತ್ತು ವಸೂಲಿ ಮಾಡುವ ಧನ ಪಿಶಾಚಿಯಾಗಿ ಬೆಂಗಳೂರಿಗರನ್ನು ಕಾಡುತ್ತಿದೆ. ಹೀಗಾಗಿ ಈ ಎಲ್ಲಾ ಅಕ್ರಮಗಳ ವಿರುದ್ಧ ಶೀಘ್ರದಲ್ಲೇ KRS ಪಕ್ಷ ಬೃಹತ್‌ ಹೋರಾಟ ನಡೆಸಲು ಸಜ್ಜಾಗಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಘು ನಂದನ್‌ ಉಪಸ್ಥಿತರಿದ್ದರು.

ಇದನ್ನೂ ಓದಿ : ಲಂಚಕ್ಕೆ ಬೇಡಿಕೆ – ಕೋಲಾರ ನಗರಸಭೆಯ ಆರ್‌ಐ ‍‍‍& ಬಿಲ್ ಕಲೆಕ್ಟರ್ ‘ಲೋಕಾ’ ಬಲೆಗೆ!

Tags: bengaloreKarnataka News beat
SendShareTweet
Previous Post

ಕಾರಿನ ಸಮೇತ ಸುಟ್ಟು ಕರಕಲಾದ ಮಾಜಿ ಶಾಸಕನ ಪುತ್ರ

Next Post

ರಾಜಸ್ಥಾನ್ ರಾಯಲ್ಸ್ ಪಾಲಿಗೆ ‘ಹೊರೆ’ಯಾಗಲಿದ್ದಾರೆಯೇ ಈ ಮೂವರು ಆಟಗಾರರು?

Related Posts

ಡೀಸೆಲ್ ವಾಹನಗಳಿಗೆ ಎದುರಾದ ‘ಯೂರಿಯಾ’ ಸಂಕಷ್ಟ.. ಸ್ಥಗಿತಗೊಳ್ಳುವ ಭೀತಿಯಲ್ಲಿ ದೇಶದ ಸಾರಿಗೆ ವ್ಯವಸ್ಥೆ!
ದೇಶ

ಡೀಸೆಲ್ ವಾಹನಗಳಿಗೆ ಎದುರಾದ ‘ಯೂರಿಯಾ’ ಸಂಕಷ್ಟ.. ಸ್ಥಗಿತಗೊಳ್ಳುವ ಭೀತಿಯಲ್ಲಿ ದೇಶದ ಸಾರಿಗೆ ವ್ಯವಸ್ಥೆ!

ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್.. ಒಮ್ಮೆಯೇ ಸಿಗಲಿದೆ 3 ತಿಂಗಳ ರೇಷನ್!
ರಾಜ್ಯ

ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್.. ಒಮ್ಮೆಯೇ ಸಿಗಲಿದೆ 3 ತಿಂಗಳ ರೇಷನ್!

ಸರ್ಕಾರದ ವಿರುದ್ಧ ಮತ್ತೊಮ್ಮೆ ಸಿಡಿದೆದ್ದ ವಿದ್ಯಾರ್ಥಿಗಳು – ಮಾ.27ಕ್ಕೆ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ!
ಕಲಬುರ್ಗಿ

ಸರ್ಕಾರದ ವಿರುದ್ಧ ಮತ್ತೊಮ್ಮೆ ಸಿಡಿದೆದ್ದ ವಿದ್ಯಾರ್ಥಿಗಳು – ಮಾ.27ಕ್ಕೆ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ!

ಕಾರಿನ ಸಮೇತ ಸುಟ್ಟು ಕರಕಲಾದ ಮಾಜಿ ಶಾಸಕನ ಪುತ್ರ
ಧಾರವಾಡ

ಕಾರಿನ ಸಮೇತ ಸುಟ್ಟು ಕರಕಲಾದ ಮಾಜಿ ಶಾಸಕನ ಪುತ್ರ

ವಾರ್‌ ಮಧ್ಯೆ ಚಿನ್ನದ ಬೆಲೆ ಕುಸಿತ : 10ಗ್ರಾಂ ಗೋಲ್ಡ್‌ ದರ ಎಷ್ಟಿದೆ ಗೊತ್ತಾ?
ಬೆಂಗಳೂರು

ವಾರ್‌ ಮಧ್ಯೆ ಚಿನ್ನದ ಬೆಲೆ ಕುಸಿತ : 10ಗ್ರಾಂ ಗೋಲ್ಡ್‌ ದರ ಎಷ್ಟಿದೆ ಗೊತ್ತಾ?

ಸಿಲಿಂಡರ್‌ ತನ್ನಿ, ತಿಂಗಳು ಪೂರ್ತಿ ಫ್ರೀ ಬಿರಿಯಾನಿ ತಿನ್ನಿ – ಗ್ಯಾಸ್‌ಗಾಗಿ ಹೋಟೆಲ್‌ ಮಾಲೀಕರ ವಿಭಿನ್ನ ಆಫರ್‌!
ಬೆಂಗಳೂರು

ಸಿಲಿಂಡರ್‌ ತನ್ನಿ, ತಿಂಗಳು ಪೂರ್ತಿ ಫ್ರೀ ಬಿರಿಯಾನಿ ತಿನ್ನಿ – ಗ್ಯಾಸ್‌ಗಾಗಿ ಹೋಟೆಲ್‌ ಮಾಲೀಕರ ವಿಭಿನ್ನ ಆಫರ್‌!

Next Post
ರಾಜಸ್ಥಾನ್ ರಾಯಲ್ಸ್ ಪಾಲಿಗೆ ‘ಹೊರೆ’ಯಾಗಲಿದ್ದಾರೆಯೇ ಈ ಮೂವರು ಆಟಗಾರರು?

ರಾಜಸ್ಥಾನ್ ರಾಯಲ್ಸ್ ಪಾಲಿಗೆ 'ಹೊರೆ'ಯಾಗಲಿದ್ದಾರೆಯೇ ಈ ಮೂವರು ಆಟಗಾರರು?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

KMF ಈಗ​​ ಆರ್‌ಸಿಬಿಯ ಅಫಿಶಿಯಲ್​ ಪಾರ್ಟ್​ನರ್.. ‘ನಂದಿನಿ’ ಪ್ರಾಡಕ್ಟ್ ಮೇಲೆ ರಾರಾಜಿಸಲಿದ್ದಾರೆ ಕಿಂಗ್ ಕೊಹ್ಲಿ!

KMF ಈಗ​​ ಆರ್‌ಸಿಬಿಯ ಅಫಿಶಿಯಲ್​ ಪಾರ್ಟ್​ನರ್.. ‘ನಂದಿನಿ’ ಪ್ರಾಡಕ್ಟ್ ಮೇಲೆ ರಾರಾಜಿಸಲಿದ್ದಾರೆ ಕಿಂಗ್ ಕೊಹ್ಲಿ!

ಡೀಸೆಲ್ ವಾಹನಗಳಿಗೆ ಎದುರಾದ ‘ಯೂರಿಯಾ’ ಸಂಕಷ್ಟ.. ಸ್ಥಗಿತಗೊಳ್ಳುವ ಭೀತಿಯಲ್ಲಿ ದೇಶದ ಸಾರಿಗೆ ವ್ಯವಸ್ಥೆ!

ಡೀಸೆಲ್ ವಾಹನಗಳಿಗೆ ಎದುರಾದ ‘ಯೂರಿಯಾ’ ಸಂಕಷ್ಟ.. ಸ್ಥಗಿತಗೊಳ್ಳುವ ಭೀತಿಯಲ್ಲಿ ದೇಶದ ಸಾರಿಗೆ ವ್ಯವಸ್ಥೆ!

ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್.. ಒಮ್ಮೆಯೇ ಸಿಗಲಿದೆ 3 ತಿಂಗಳ ರೇಷನ್!

ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್.. ಒಮ್ಮೆಯೇ ಸಿಗಲಿದೆ 3 ತಿಂಗಳ ರೇಷನ್!

ನೌಕಾಪಡೆಯಲ್ಲಿ ಅಗ್ನಿವೀರ್ ಹುದ್ದೆಗಳ ನೇಮಕಾತಿ.. ಕೂಡಲೇ ಅರ್ಜಿ ಸಲ್ಲಿಸಿ

ನೌಕಾಪಡೆಯಲ್ಲಿ ಅಗ್ನಿವೀರ್ ಹುದ್ದೆಗಳ ನೇಮಕಾತಿ.. ಕೂಡಲೇ ಅರ್ಜಿ ಸಲ್ಲಿಸಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

KMF ಈಗ​​ ಆರ್‌ಸಿಬಿಯ ಅಫಿಶಿಯಲ್​ ಪಾರ್ಟ್​ನರ್.. ‘ನಂದಿನಿ’ ಪ್ರಾಡಕ್ಟ್ ಮೇಲೆ ರಾರಾಜಿಸಲಿದ್ದಾರೆ ಕಿಂಗ್ ಕೊಹ್ಲಿ!

KMF ಈಗ​​ ಆರ್‌ಸಿಬಿಯ ಅಫಿಶಿಯಲ್​ ಪಾರ್ಟ್​ನರ್.. ‘ನಂದಿನಿ’ ಪ್ರಾಡಕ್ಟ್ ಮೇಲೆ ರಾರಾಜಿಸಲಿದ್ದಾರೆ ಕಿಂಗ್ ಕೊಹ್ಲಿ!

ಡೀಸೆಲ್ ವಾಹನಗಳಿಗೆ ಎದುರಾದ ‘ಯೂರಿಯಾ’ ಸಂಕಷ್ಟ.. ಸ್ಥಗಿತಗೊಳ್ಳುವ ಭೀತಿಯಲ್ಲಿ ದೇಶದ ಸಾರಿಗೆ ವ್ಯವಸ್ಥೆ!

ಡೀಸೆಲ್ ವಾಹನಗಳಿಗೆ ಎದುರಾದ ‘ಯೂರಿಯಾ’ ಸಂಕಷ್ಟ.. ಸ್ಥಗಿತಗೊಳ್ಳುವ ಭೀತಿಯಲ್ಲಿ ದೇಶದ ಸಾರಿಗೆ ವ್ಯವಸ್ಥೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat