ಜಮೀನು ವಿಚಾರಕ್ಕೆ ರೌಡಿಶೀಟರ್ ಶಿವಪ್ರಕಾಶ್ ಹಾಗೂ ಭೈರತಿ ಬಸವರಾಜ್, ಬೆಂಬಲಿಗರ ನಡುವೆ ಗಲಾಟೆ ನಡೆದಿರುವುದಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್ ಹೆಸರು ತಳುಕು ಹಾಕಿಕೊಂಡಿದೆ.
ಬೀದರಹಳ್ಳಿ ಹೋಬಳಿ ಕಿತ್ತಗನೂರು ಸಿಂಗಾರೆಡ್ಡಿ ಎಂಬುವವರಿಗೆ ಸೇರಿದ ಸರ್ವೇ ನಂಬರ್ 212 ಜಿಪಿಎ ಮಾಡಿಸಿಕೊಂಡಿದ್ದ ರೌಡಿಶೀಟರ್ ಶಿವಪ್ರಕಾಶ್, ಜಿಪಿಎ ಕ್ಯಾನ್ಸಲ್ ಮಾಡಬೇಕು ಹಾಗೂ ಪೊಸಿಷನ್ ಬಿಟ್ಟುಕೊಡಬೇಕು ಎಂದು ಬೆದರಿಕೆ ಗ್ಯಾಂಗ್ ಬೆದರಿಕೆ ಹಾಕಿತ್ತು ಎನ್ನಲಾಗಿತ್ತು.
ಜಗದೀಶ್ ಅಲಿಯಾಸ್ ಜಗ್ಗನ ಗ್ಯಾಂಗ್‌ನಿಂದ ಶಿವಪ್ರಕಾಶ್ ಗೆ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ನಗರ ಪೊಲೀಸ್ ಆಯುಕ್ತರಿಗೆ ಮೃತ ರೌಡಿಶೀಟರ್ ಶಿವಪ್ರಕಾಶ್ ದೂರು ನೀಡಿದ್ದರು ಎನ್ನಲಾಗಿದೆ.
ದೂರಿನಲ್ಲಿ ಭೈರತಿ ಬಸವರಾಜ್ ಹಾಗೂ ಗ್ಯಾಂಗ್ ನಿಂದ ಜೀವಬೆದರಿಕೆ ಇದೆಯಿದೆ ಎಂದು ಶಿವಪ್ರಕಾಶ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ಬೆದರಿಕೆ ಹಾಕಿದ್ದ ವೀಡಿಯೊ ಸಮೇತ ದೂರು ನೀಡಿದ್ದ. ಭೈರತಿ ಬಸವರಾಜ್, ಜಗದೀಶ್ ಅಲಿಯಾಸ್ ಜಗ್ಗ, ಹಾಗೂ ಕಿರಣ್ ಸಹಚರರ ವಿರುದ್ಧ ದೂರು ನೀಡಲಾಗಿತ್ತು. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಇದೀಗ ದೂರು ಕೊಟ್ಟ ನಾಲ್ಕು ತಿಂಗಳಲ್ಲಿ ರೌಡಿಶೀಟರ್ ಶಿವಪ್ರಕಾಶ್ ಹತ್ಯೆಯಾಗಿದೆ. ಇದೇ ಹಿನ್ನೆಲೆಯಲ್ಲಿ ರೌಡಿಶೀಟರ್ ಶಿವಪ್ರಕಾಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.



















