ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಶಾಸಕ ಬೈರತಿ ಬಸವರಾಜು ಬಂಧನಕ್ಕೆ ಅನುಮತಿ ಕೋರಿ ಸಿಐಡಿ ತಂಡವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಸಿಐಡಿ ಅಧಿಕಾರಿಗಳಿಂದ ಸಲ್ಲಿಸಲಾಗಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್ ನಿಂದ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಲಾಗಿತ್ತು. ಅದರಂತೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು. ನಂತರ ಒಂದೂವರೆ ತಿಂಗಳಿಂದಲೂ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ತನಿಖೆ ವೇಳೆ ಬೈರತೀ ಬಸವರಾಜ್ ವಿರುದ್ಧ ಕೆಲ ಸಾಕ್ಷ್ಯಗಳು ಪತ್ತೆಯಾಗಿದ್ದು, ಇದೀಗ ಬಂಧನ ಮಾಡುವಷ್ಟು ಸಾಕ್ಷ್ಯಗಳು ಲಭ್ಯವಿದೆ ಸಿಐಡಿ ತಂಡ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ
ಇನ್ನು ಬೈರತೀ ಬಸವರಾಜ್ ಪರ ವಕೀಲರು ಸಿಐಡಿ ಅಧಿಕಾರಿಗಳ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ, ರಕ್ಷಣೆ ಆದೇಶ ತೆರವುಗೊಳಿಸಿ ಎಂದು ಪ್ರತಿವಾದಿಸಲಿದ್ದಾರೆ ಎಂದು ತಿಳಿದು ಬಂದಿದೆ.