ಬೆಂಗಳೂರು: ಕೈಯಲ್ಲಿ ತಲ್ವಾರ್ ಹಿಡಿದು ಬೈಕ್ ರೈಡ್ ಮಾಡಿದ್ದ ರೌಡಿಶೀಟರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರದ ಬಂಬೂ ಬಜಾರ್ ನಲ್ಲಿ ಬೈಕ್ ರೈಡ್ ವೇಳೆ ಆರೋಪಿ ಮಾರಕಾಸ್ತ್ರ ಪ್ರದರ್ಶನ ಮಾಡಿದ್ದ. ಡಿಯೋ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿ ಕುಳಿತಿದ್ದ ರೌಡಿಶೀಟರ್ ತಲ್ವಾರ್ ಪ್ರದರ್ಶನ ಮಾಡಿದ್ದ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಆಧರಿಸಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಆರೋಪಿ ರೌಡಿಶೀಟರ್ ಎಂಬ ವಿಚಾರ ಬಯಲಾಗಿತ್ತು. ಹೀಗಾಗಿ ಪೊಲೀಸರು ‘ಆರ್ಮ್ಸ್ ಆ್ಯಕ್ಟ್’ ಅಡಿ ರೌಡಿಶೀಟರ್ ಸಿದ್ದಿಕಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿ ಮೇಲೆ 17 ಪ್ರಕರಣ ಇರುವುದು ಪತ್ತೆಯಾಗಿದೆ. ಈತನ ವಿರುದ್ಧ ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಕೂಡ ಜಾರಿಯಾಗಿತ್ತು. ಸದ್ಯ ಪೊಲೀಸರ ತನಿಖೆ ಮುಂದುವರೆದಿದ್ದು, ಆರೋಪಿ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ದಟ್ಟವಾಗಿದೆ.