ಬೆಂಗಳೂರು : ಪುಡಿ ರೌಡಿಗಳು ಮಾರಕಾಸ್ತ್ರ ಹಿಡಿದು ಮನೆಯೊಂದಕ್ಕೆ ನುಗ್ಗಲು ಯತ್ನಿಸಿದಾಗ ಎದುರು ಮನೆಯ ವ್ಯಕ್ತಿ ಧೈರ್ಯದಿಂದ ಪ್ರತಿಕ್ರಿಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿರುವ ಘಟನೆ ನಗರದ ಸುಬ್ರಮಣ್ಯಪುರದ ಅಯ್ಯಪ್ಪಸ್ವಾಮಿ ಲೇಔಟ್ನಲ್ಲಿ ನಡೆದಿದ್ದು, ವ್ಯಕ್ತಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಸಂಜೆ ಸುಮಾರು ಆರು ಗಂಟೆ ವೇಳೆಗೆ ಸುಬ್ರಮಣ್ಯಪುರದ ಅಯ್ಯಪ್ಪಸ್ವಾಮಿ ಲೇಔಟ್ನ ಮನೆಯೊಂದರ ಬಳಿ ನಾಲ್ವರು ಅನುಮಾನಾಸ್ಪದವಾಗಿ ನಿಂತಿದ್ದರು. ಬೈಕ್ನಲ್ಲಿ ಲಾಂಗ್ ಇಟ್ಟುಕೊಂಡು ಮನೆಯೊಳಗೆ ನುಗ್ಗಲು ಕಾದು ಕುಳಿತಿದ್ದರು ಎನ್ನಲಾಗಿದೆ
ಈ ವೇಳೆ ಎದುರು ಮನೆಯ ವ್ಯಕ್ತಿ ಮೊಬೈಲ್ನಲ್ಲಿ ವಿಡಿಯೋ ಸೆರೆಹಿಡಿದು ಜೋರಾಗಿ ಕೂಗಿ ಅವರನ್ನು ಬೆದರಿಸಿದ್ದಾನೆ. ಮನೆ ಸುತ್ತ ಸಿಸಿಟಿವಿಗಳು ಇವೆ, ನಾಳೆ ಬೆಳಗ್ಗೆ ಜೈಲಿಗೆ ಹೋಗ್ತೀರಾ ಎಂದು ಗಟ್ಟಿಯಾಗಿ ಹೇಳಿದ ಕಾರಣ ಗ್ಯಾಂಗ್ ಬೆಚ್ಚಿಬಿದೆ. ವ್ಯಕ್ತಿಯ ಕೂಗಾಟ ಹಾಗೂ ವಿಡಿಯೋ ತೆಗೆದುಕೊಳ್ಳುತ್ತಿರುವುದನ್ನು ಕಂಡು ಖದೀಮರು ಬೈಕ್ನಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ನಂತರ ವಿಡಿಯೋ ಆಧಾರದ ಮೇಲೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಮುಂದುವರೆದಿದೆ.
ಬೆಂಗಳೂರು : ಮೆಜೆಸ್ಟಿಕ್ ಬಳಿ ಯುವಕನ ಹುಚ್ಚಾಟ.. ಮಾಜಿ ಸಿಎಂ ಗುಂಡೂರಾವ್ ಪ್ರತಿಮೆ ವಿರೂಪಕ್ಕೆ ಯತ್ನ!


















