ಈ ಪ್ರೇಮಿಗಳ ಹುಚ್ಚಾಟ ಒಂದೊಂದಲ್ಲ, ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ. ಆದರೆ, ಪ್ರೇಮಿಗಳಿಗೂ ಕಣ್ಣು ಕಾಣಲ್ವಾ? ಎಲ್ಲೆಂದರಲ್ಲಿ ಲೋಕದ ಜ್ಞಾನವೇ ಇಲ್ಲದೇ ಅಸಭ್ಯವಾಗಿ ವರ್ತಿಸುತ್ತಾರೆ. ಮೊನ್ನೆಯಷ್ಟೆ ಬಸ್ ನಲ್ಲಿ ಪ್ರೇಮಿಗಳಿಬ್ಬರು ಲಿಪ್ ಲಾಕ್ ಮಾಡುತ್ತಾ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಅದರ ಬೆನ್ನಲ್ಲೇ ಇದೀಗ ಇಲ್ಲೊಂದು ಕಡೆ ಕಾಲೇಜ್ ಕ್ಯಾಂಪಸ್ ನಲ್ಲೇ ಪ್ರೇಮಿಗಳಿಬ್ಬರು ಅಸಭ್ಯವಾಗಿ ವರ್ತಿಸಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರೇಮಿಗಳಿಬ್ಬರ ಅತಿರೇಕದ ವರ್ತನೆಯ ವಿಡಿಯೋವೊಂದು ವೈರಲ್ ಆಗಿದ್ದು, ಕಾಲೇಜು ಬಂಕ್ ಮಾಡಿ ಪ್ರೇಮಿಗಳಿಬ್ಬರೂ ನಡುಬೀದಿಯಲ್ಲೇ ರೊಮ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಪ್ಪ- ಅಮ್ಮ ಕೂಲಿ ನಾಲಿ ಮಾಡಿ ಕಾಲೇಜಿಗೆ ಸೇರಿಸಿದರೆ ಈ ರೀತಿ ಮಾಡುತ್ತಾರೆ. ಇವರಿಗೆ ತಕ್ಕ ಶಿಕ್ಷೆ ಆಗಲೇಬೆಕೆಂದು ಕಾಮೆಂಟ್ ಮಾಡುತ್ತಿದ್ದಾರೆ.