ಪುಜಾರ ಮತ್ತು ರಹಾನೆ ದೇಶೀಯ ಕ್ರಿಕೆಟ್ ನಲ್ಲಿ ಆಡುತ್ತಾ ತಮ್ಮ ಕ್ರಿಕೆಟ್ ಸಾಧನೆ ಹೆಚ್ಚಿಸಿಕೊಂಡ ರೀತಿಯಲ್ಲೇ ರೋಹಿತ್ ಶರ್ಮಾ ಕೂಡ ಫಾರ್ಮ್‌ಗೆ ಮರಳಬೇಕು ಎಂದು ಭಾರತ ತಂಡ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಅವರ ಪ್ರದರ್ಶನದಿಂದ ಅವರಿಗೆ ಆಗಿರುವ ಹಿನ್ನಡೆಯನ್ನು ಉದ್ದೇಶಿಸಿ ಅವರು ಈ ಮಾತನ್ನು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಿಶ್ಲೇಷಕರು, ಭಾರತ ತಂಡದ ಮಾಜಿ ಆಟಗಾರರಾಗಿರುವ ಸಂಜಯ್ ಬಂಗಾರ್ ಮತ್ತು ದೀಪ್ ದಾಸ್ ಗುಪ್ತ ಚರ್ಚೆಯಲ್ಲಿ ಪಾಲ್ಗೊಂಡು ಭಾರತ ತಂಡದ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಮಾತನಾಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪ್ರದರ್ಶನ ನೀಡಲು ಏಕೆ ಎಡವಿತು ಎಂಬುವುದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅವರಿಬ್ಬರೂ ಹಂಚಿಕೊಂಡರು. ವಿಶೇಷವಾಗಿ ರೋಹಿತ್ ಶರ್ಮಾ(Rohit Sharma) ಮತ್ತು ತಂಡದ ಆಯ್ಕೆಯ ಕುರಿತು ಅವರು ಚರ್ಚೆ ನಡೆಸಿದರು.
ಈ ವೇಳೆ ಸಂಜಯ್ ಬಂಗಾರ್ (Sanjay Bangar)ಮಾತನಾಡಿ, ರೋಹಿತ್ ಶರ್ಮಾ ಫಾರ್ಮ್ ಕಂಡುಕೊಳ್ಳಲು ಏನು ಮಾಡಬೇಕು ಎಂದು ವಿವರಿಸಿದರು. ರನ್ ಗಳಿಸಲು ಯಾವುದು ಪ್ರೇರಣೆಯಾಗಬಹುದು ಎಂಬುವುದನ್ನು ಹೇಳಿದರು.
37 ವರ್ಷದ ಆಟಗಾರನಾಗಿರುವ ರೋಹಿತ್ ಅವರ ಪ್ರತಿಯೊಂದು ವೈಫಲ್ಯವೂ ದೋಷದ ರೀತಿ ಕಾಣುತ್ತದೆ. ಕ್ರಿಕೆಟಿಗರು ಅತ್ಯಂತ ಗರ್ವಭಾವ ಹೊಂದಿರುತ್ತಾರೆ . ತಮ್ಮ ಹಿಂದಿನ ಶ್ರೇಷ್ಠ ಪ್ರದರ್ಶನ ನೆನಪಿಸಿಕೊಂಡಾಗ ಮತ್ತು ಅದನ್ನೇ ಮರುಕಳಿಸಲು ಸಾಧ್ಯವಾಗದಿದ್ದಾಗ ಅವರಿಗೆ ಬೇಸರವಾಗುತ್ತದೆ. ಯುವ ಆಟಗಾರರು ಉತ್ತಮವಾಗಿ ಆಡುತ್ತಿರುವುದನ್ನು ನೋಡಿದಾಗ ಇನ್ನಷ್ಟು ಆತಂಕವಾಗುತ್ತದೆ. ಅಂತೆಯೇ ರೋಹಿತ್ ಗೆ ಟೆಸ್ಟ್ ಕ್ರಿಕೆಟ್ ಆಡುವ ಹಂಬಲವಿದ್ದರೆ ಅವರು ಕ್ರಿಯಾಶೀಲರಾಗಬೇಕು ಎಂದು ಹೇಳಿದರು.
ದೇಶೀಯ ಕ್ರಿಕೆಟ್ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ರೋಹಿತ್ ಶರ್ಮಾ ಜತೆಗಾರರದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಇತ್ತೀಚಿನ ದಿನಗಳಲ್ಲಿ ದೇಶೀಯ ಕ್ರಿಕೆಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ದೇಶೀಯ ಮೈದಾನಗಳಲ್ಲಿ ಬೆವರು ಹರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ತೀವ್ರತೆಯೊಂದಿಗೆ ಹೋಲಿಸಿದಾಗ ತುಂಬಾ ಕಡಿಮೆ ಮಟ್ಟದ ಪಂದ್ಯಗಳಾಗಿವೆ. ಹೀಗಾಗಿ ಅವರು ಉತ್ತಮವಾಗಿ ಆಡುತ್ತಿದ್ದಾರೆ. ರೋಹಿತ್ ಭಾರತಕ್ಕಾಗಿ ಮುಂದುವರೆಯಲು ಬಯಸಿದ್ದೇನೆ ಎಂದಿದ್ದಾರೆ. ಅಂತೆಯೇ ದೇಶೀಯ ಕ್ರಿಕೆಟ್‌ನಲ್ಲಿ ಅವರು ಪ್ರದರ್ಶನ ನೀಡಿದರೆ ಅವರನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಹಂಬಲ ಇದೆಯೇ?
ಭಾರತದ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್ ಗುಪ್ತ ಮಾತನಾಡಿ “ನನ್ನ ದೃಷ್ಟಿಯಲ್ಲಿ ಅತಿ ದೊಡ್ಡ ಪ್ರಶ್ನೆಯೆಂದರೆ, ಅವರು ಇನ್ನೂ ಆಡುವ ಹಂಬಲವನ್ನು ಹೊಂದಿದ್ದಾರೆಯೇ ಎಂಬುದು? ಈ ಹಂಬಲ ಅತ್ಯಗತ್ಯ. ಕನಿಷ್ಠ ಒಂದು ಅಥವಾ ಎರಡು ದೇಶೀಯ ಪಂದ್ಯಗಳ ಮೂಲಕ ಉತ್ಸಾಹವನ್ನು ಅಳೆಯಲು ಸಾಧ್ಯ. ಅವರ ಪ್ರತಿಭೆ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ.
ವಿರಾಟ್ ಅವರು ಆಡುವ ರೀತಿಯನ್ನು ನೋಡಿದಾಗ ಆ ಕೊನೆಯ ಇನಿಂಗ್ಸ್‌ನಲ್ಲಿ ಚೆನ್ನಾಗಿ ಆಡಿದ್ದರು. ಆದರೆ, ಒಂದು ಕೆಟ್ಟ ಶಾಟ್ ಹೊಡೆದರು. ಅವರು ದೊಡ್ಡ ಸಾಧನೆಗಳನ್ನು ಮಾಡಿರುವ ಕಾರಣ ತ್ಯಾಗದ ಮನೋಭಾವ ಮುಖ್ಯ ಎಂದು ಹೇಳಿದರು.
ತಂಡದ ಆಯ್ಕೆ ತಪ್ಪುಗಳು
“ತಂಡವನ್ನು ಆಯ್ಕೆ ಮಾಡುವ ರೀತಿ ನಿಮ್ಮ ಮನೋಭಾವ ಪ್ರತಿಬಿಂಬಿಸುತ್ತದೆ ಎಂದು ಗುಪ್ತಾ ಹೇಳಿದರು. ಮೊದಲ ಟೆಸ್ಟ್ ಪಂದ್ಯದಿಂದಲೂ ಭಾರತ ತಂಡವನ್ನು ರಕ್ಷಣಾತ್ಮಕ ಮನೋಭಾವದಿಂದ ಆಯ್ಕೆ ಮಾಡಲಾಗಿದೆ. 8ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವವರನ್ನು ಆಯ್ಕೆ ಮಾಡಲಾಗಿತ್ತು. ವಾಷಿಂಗ್ಟನ್ ಸುಂದರ್ ಅವರನ್ನು ಅತಿ ಕಡಿಮೆ ಓವರ್‌ಗಳಲ್ಲಿ ಬೌಲಿಂಗ್ ಮಾಡಿಸಿ ಅವರನ್ನು ವಿಶೇಷ ಬ್ಯಾಟರ್ ಎಂದು ಪರಿಗಣಿಸಿದರು. ಹೀಗಾಗಿ ಬೌಲಿಂಗ್ ಪ್ರಭಾವ ಕಡಿಮೆಯಾಯಿತು ಎಂದು ಹೇಳಿದರು.
ಸಂಜಯ್ ಬಂಗಾರ್ ಮಾತನಾಡಿ, “ನಿತೀಶ್ ರೆಡ್ಡಿ ಪ್ರದರ್ಶನ ತಂಡವನ್ನು ಗೊಂದಲಕ್ಕೀಡಾದಂತೆ ಮಾಡಿತು. ವಾಷಿಂಗ್ಟನ್ ಸುಂದರ್ ಅಥವಾ ರವೀಂದ್ರ ಜಡೇಜಾ ಅವರ ಜೊತೆಯಲ್ಲಿನ ಅವರ ಕಾಂಬಿನೇಷನ್ ಗೊಂದಲಕಾರಿ. ಫಾರ್ಮ್‌ನಲ್ಲಿ ಇರುವ ಆಟಗಾರನನ್ನು ತಂಡದಿಂದ ಹೊರಹಾಕುವುದು ಕಷ್ಟ. ಪಿಚ್ ಅಗತ್ಯಗಳನ್ನು ಗಮನಿಸಿ ನಿರ್ಧಾರಗಳನ್ನು ಮಾಡಬೇಕಿತ್ತು ಎಂದು ಹೇಳಿದರು.
ರೋಹಿತ್ ದೇಶೀಯ ಕ್ರಿಕೆಟ್ ಮೂಲಕ ಫಾರ್ಮ್‌ಗೆ ಮರಳಬೇಕು : ಸಂಜಯ್ ಬಂಗಾರ್
ಪುಜಾರ ಮತ್ತು ರಹಾನೆ ದೇಶೀಯ ಕ್ರಿಕೆಟ್ ನಲ್ಲಿ ಆಡುತ್ತಾ ತಮ್ಮ ಕ್ರಿಕೆಟ್ ಸಾಧನೆ ಹೆಚ್ಚಿಸಿಕೊಂಡ ರೀತಿಯಲ್ಲೇ ರೋಹಿತ್ ಶರ್ಮಾ ಕೂಡ ಫಾರ್ಮ್‌ಗೆ ಮರಳಬೇಕು ಎಂದು ಭಾರತ ತಂಡ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಅವರ ಪ್ರದರ್ಶನದಿಂದ ಅವರಿಗೆ ಆಗಿರುವ ಹಿನ್ನಡೆಯನ್ನು ಉದ್ದೇಶಿಸಿ ಅವರು ಈ ಮಾತನ್ನು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಿಶ್ಲೇಷಕರು, ಭಾರತ ತಂಡದ ಮಾಜಿ ಆಟಗಾರರಾಗಿರುವ ಸಂಜಯ್ ಬಂಗಾರ್ ಮತ್ತು ದೀಪ್ ದಾಸ್ ಗುಪ್ತ ಚರ್ಚೆಯಲ್ಲಿ ಪಾಲ್ಗೊಂಡು ಭಾರತ ತಂಡದ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಮಾತನಾಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪ್ರದರ್ಶನ ನೀಡಲು ಏಕೆ ಎಡವಿತು ಎಂಬುವುದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅವರಿಬ್ಬರೂ ಹಂಚಿಕೊಂಡರು. ವಿಶೇಷವಾಗಿ ರೋಹಿತ್ ಶರ್ಮಾ ಮತ್ತು ತಂಡದ ಆಯ್ಕೆಯ ಕುರಿತು ಅವರು ಚರ್ಚೆ ನಡೆಸಿದರು.
ಈ ವೇಳೆ ಸಂಜಯ್ ಬಂಗಾರ್ ಮಾತನಾಡಿ, ರೋಹಿತ್ ಶರ್ಮಾ ಫಾರ್ಮ್ ಕಂಡುಕೊಳ್ಳಲು ಏನು ಮಾಡಬೇಕು ಎಂದು ವಿವರಿಸಿದರು. ರನ್ ಗಳಿಸಲು ಯಾವುದು ಪ್ರೇರಣೆಯಾಗಬಹುದು ಎಂಬುವುದನ್ನು ಹೇಳಿದರು.