ಬೆಂಗಳೂರು: ರೋಹಿತ್ ಶರ್ಮಾ ಅವರ ಮರೆಗುಳಿತನದ ಹಿಂದೆ ಸಾಕಷ್ಟು ದೊಡ್ಡ ಕತೆಗಳಿವೆ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಗಾಗಿ ದುಬೈನಲ್ಲಿದ್ದಾರೆ. ಅಂತೆಯೇ ಅವರು ಮತ್ತೆ ಅಲ್ಲಿ ಮರೆಗುಳಿತನ ಪ್ರದರ್ಶನ ಮಾಡಿದ್ದಾರೆ. ಈ ಬಾರಿ ಅವರು ತಮ್ಮ ಮೊಬೈಲ್ ಫೊನ್ ಮರೆತಿದ್ದಾರೆ.
ಈ ರೀತಿ ಆಗುವುದು ಇದು ಮೊದಲ ಬಾರಿ ಅಲ್ಲ. ಪಾಸ್ಪೋರ್ಟ್ , ಐಪಾಡ್ಗಳಂಥ ವಸ್ತುಗಳನ್ನು ಕಳೆದುಕೊಂಡ ಮತ್ತು ಟಾಸ್ ಆದ ಬಳಿಕ ತಂಡದ ನಿರ್ಧಾರವನ್ನು ಮರೆತ ಇತಿಹಾಸವನ್ನೂ ರೋಹಿತ್ ಹೊಂದಿದ್ದಾರೆ. ತಂಡದ ಸದಸ್ಯರು ಮತ್ತು ಅಭಿಮಾನಿಗಳಿಗೆ ಇವೆಲ್ಲವೂ ತಮಾಷೆಯ ಕ್ಷಣವಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಭಾರತದ ಪಂದ್ಯದ ಮೊದಲು ಅಭ್ಯಾಸದ ನಂತರ, ರೋಹಿತ್ ಶರ್ಮಾ ತಮ್ಮ ಫೋನ್ ಅನ್ನು ಕಳೆದುಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಗಳು ವೈರಲ್ ಆಗಿವೆ. ವೀಡಿಯೊದಲ್ಲಿ, ಅವರು ಮೊಬೈಲ್ ಕಾಣೆಯಾಗಿದೆ ಎಂದು ಗೊತ್ತಾದ ತಕ್ಷಣ ತಂಡದ ಬಸ್ಸಿನಿಂದ ಇಳಿದು ಸಹಾಯಕ ಸಿಬ್ಬಂದಿಯೊಂದಿಗೆ ಹುಡುಕಾಟ ನಡೆಸುವುದನ್ನು ಕಾಣಬಹುದು.
ಮುಂಬರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು, ಮಾರ್ಚ್ 2ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ನಾಯಕ ರೋಹಿತ್ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಮಾರ್ಚ್ 4ರಂದು ಭಾರತದ ಸೆಮಿಫೈನಲ್ ನಿಗದಿಯಾಗಿದ್ದು, ಟೀಮ್ ಮ್ಯಾನೇಜ್ಮೆಂಟ್ ರೋಹಿತ್ ಗೆ ವಿಶ್ರಾಂತಿ ನೀಡಲು ಬಯಸಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ರಿಷಭ್ ಪಂತ್ ಅಥವಾ ವಾಷಿಂಗ್ಟನ್ ಸುಂದರ್ ಅವರನ್ನು ಪ್ಲೇಯಿಂಗ್ ಇಲೆವೆನ್ಗೆ ಕರೆತರುವ ಬಗ್ಗೆ ಭಾರತ ಕ್ರಿಕೆಟ್ ತಂಡದ ಮ್ಯಾನೇಜ್ಮೆಂಟ್ ಯೋಜನೆ ನಡೆಸಿದೆ.