ದುಬೈ ಬಾಂಗ್ಲಾದೇಶ (Bangladesh) ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಅನಾರೋಗ್ಯ ಎದುರಾಗಿದೆಯೇ ಎಂಬ ಆತಂಕ ಶುರುವಾಗಿದೆ. ಪಂದ್ಯಕ್ಕೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ರೋಹಿತ್ ನಿರಂತರ ಕೆಮ್ಮುತ್ತಲೇ ಇದ್ದರು. ಹೀಗಾಗಿ ಮೊದಲ ಪಂದ್ಯಕ್ಕೆ ಅವರು ಕಣಕ್ಕಿಳಿಯುತ್ತಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ರೋಹಿತ್ ಪ್ರತಿ ಪ್ರಶ್ನೆಯ ಅವಧಿಯಲ್ಲೂ ಅವರು ಕೆಮ್ಮುತ್ತಲೇ ಮಾತನಾಡಿದ್ದು ಕಂಡುಬಂತು. ಆಗ ಅಲ್ಲೇ ಇದ್ದ ಸಂಘಟನಾ ಸಮಿತಿ ಸದಸ್ಯರು ನೀರು ಕೊಟ್ಟರೂ ಪಡೆಯದೆ ‘ನಾನು ಚೆನ್ನಾಗಿದ್ದೇನೆ’ ಎಂದರು.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಲು ಸಜ್ಜಾಗಿರುವ ಭಾರತ, ಫೆಬ್ರವರಿ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಇದೇ ವೇಳೆ ಭಾರತ ತಂಡದಲ್ಲಿ ಐವರು ಸ್ಪಿನ್ನರ್ಗಳ ಹೊಂದಿರುವ ಕುರಿತು ಹೆಚ್ಚು ಪ್ರಶ್ನೆಗಳನ್ನು ಎದುರಿಸಿ, ಐವರು ಸ್ಪಿನ್ನರ್ಗಳ ಆಯ್ಕೆ ಮಾಡಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನ ಕಾರ್ಯನಿರತ ವೇಳಾಪಟ್ಟಿ ಕಾರಣ ಆಟಗಾರರಿಗೆ ಗಾಯಗಳು ಹೆಚ್ಚಾಗುತ್ತಿರುವುದನ್ನು ಒಪ್ಪಿದ ರೋಹಿತ್, ಪ್ರಸ್ತುತ ತಂಡದ ಮೇಲೆ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ದೇಶವನ್ನು ಪ್ರತಿನಿಧಿಸುವುದು ಅತ್ಯಂತ ಮುಖ್ಯ. ಕೆಲವೊಮ್ಮೆ ಪ್ರಮುಖ ಆಟಗಾರರನ್ನು ಗಾಯಗಳಿಂದ ಕಳೆದುಕೊಳ್ಳುತ್ತೇವೆ. ಆದರೆ ನಮ್ಮ ತಂಡದಲ್ಲಿ ಇತರ ಅನುಭವಿ ಕ್ರಿಕೆಟಿಗರೂ ಇದ್ದಾರೆ ಎಂದಿದ್ದಾರೆ. ಚಾಂಪಿಯನ್ಸ್ ಟ್ರೋಫಿಗಿಂತ ಮೊದಲು ನಮಗೆ ಹೆಚ್ಚಿನ ಪಂದ್ಯಗಳು ಇರಲಿಲ್ಲ. ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಹೆಚ್ಚಿನದನ್ನು ಸಾಧಿಸಿದ್ದೇವೆ ಎಂದು ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.