ಬೆಂಗಳೂರು: ಐಪಿಎಸ್ ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ಮಾನನಷ್ಟ ಪ್ರಕರಣ ಹೂಡಿದ್ದು, ಇಂದು ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್ ನಲ್ಲಿ ಸಾಕ್ಷ್ಯ ವಿಚಾರಣೆ ನಡೆಯಿತು.
ಕೇಸ್ ನ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಹಾಗೂ ರೂಪಾ ಮೌದ್ಗಿಲ್ ಇಂದು ಕೋರ್ಟ್ ಗೆ ಹಾಜರಾಗಿದ್ದರು. ರೂಪಾ ಮೌದ್ಗಿಲ್ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಿದರು. 45 ನಿಮಿಷಗಳ ಕಾಲ ರೋಹಿಣಿ ಸಿಂಧೂರಿ ಪರ ವಾಟೀ ಸವಾಲು ನಡೆಸಿದರು.
ಈ ವೇಳೆ ಹಿರಿಯ ಅಧಿಕಾರಿಗಳಿಗೆ 5ನೇ ಎಸಿಎಂಎಂ ನ್ಯಾಯಾಧೀಶ ವಿಜಯ್ ಕುಮಾರ್ ಜಾಟ್ಲಾ ಸಲಹೆ ನೀಡಿದರು. ಇಬ್ಬರೂ ಉತ್ತಮ ಹೆಸರು ಗಳಿಸಿದ ಹಿರಿಯ ಅಧಿಕಾರಿಗಳಾಗಿದ್ದೀರಿ. ನಿಮ್ಮ ಸಮಯವನ್ನು ಸಮಾಜಕ್ಕಾಗಿ ಮೀಸಲಿಡಬೇಕು. ಕೋರ್ಟ್ ಕಲಾಪದಲ್ಲಿ ವ್ಯಯಿಸುವ ಬದಲು, ರಾಜಿ ಸಾಧ್ಯವೇ? ಎಂಬುವುದನ್ನು ಯೋಚಿಸಿ ಎಂದು ಕಿವಿ ಮಾತು ಹೇಳಿದರು. ಅಲ್ಲದೇ, One minute apology ಪುಸ್ತಕ ಓದಲು ಸಲಹೆ ನೀಡಿದರು. ಅಲ್ಲದೇ, ಮತ್ತೆ ವಿಚಾರಣೆಯನ್ನು ಕೋರ್ಟ್ ಫೆ. 12ಕ್ಕೆ ಮುಂದೂಡಿತು. ಸುಪ್ರೀಂ ಕೋರ್ಟ್ ಕೂಡಾ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲು ಸಲಹೆ ನೀಡಿತ್ತು.