ಬೆಂಗಳೂರು: ಬಿಜೆಪಿ ಮುಖಂಡ ರಮೇಶ್ ಬಾಬು ಅವರ ಮನೆಯಲ್ಲಿ ನಡೆದ ಎರಡು ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ವರ್ಷವೊಂದರ ಬಳಿಕ ಮತ್ತೆ ಅದೇ ಏರಿಯಾದಲ್ಲಿ ಕಳ್ಳತನಕ್ಕೆ ಯತ್ನಿಸಿದ ನೇಪಾಳಿ ಕಳ್ಳರನ್ನು ಎಚ್.ಎ.ಎಲ್ ಪೊಲೀಸ್‌ರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಭರತ್ ಬಿಸ್ತಾ ಹಾಗೂ ಉದಯ್ ಬಿಸ್ತಾ ಎಂದು ಗುರುತಿಸಲಾಗಿದೆ. ಇವರನ್ನು ಬೆಂಗಳೂರಿನ ಎಚ್.ಎ.ಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಕಳೆದ 2025ರ ಮೇ ತಿಂಗಳಲ್ಲಿ ಬಿಜೆಪಿ ಮುಖಂಡ ರಮೇಶ್ ಬಾಬು ಅವರ ಮನೆಯಲ್ಲಿ ಭಾರೀ ದರೋಡೆ ನಡೆದಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ದೀಪಾ ಹಾಗೂ ರಾಜು ದಂಪತಿ, ಎರಡು ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 10 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ದರೋಡೆಗೆ ಭರತ್ ಬಿಸ್ತಾ ಮತ್ತು ಉದಯ್ ಬಿಸ್ತಾ ಕೈ ಜೋಡಿಸಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.
ದರೋಡೆ ಬಳಿಕ ಚಿನ್ನಾಭರಣ ಸಮೇತ ಆರೋಪಿಗಳು ನೇಪಾಳ ಗಡಿ ದಾಟಿದ್ದರು. ಅಂದಿನಿಂದಲೇ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು. ಸುಮಾರು ಹತ್ತು ದಿನಗಳ ಹಿಂದೆ ಭರತ್ ಬಿಸ್ತಾ ಹಾಗೂ ಉದಯ್ ಬಿಸ್ತಾ ಬೆಂಗಳೂರಿಗೆ ವಾಪಸ್ ಬಂದಿದ್ದರು. ರಮೇಶ್ ಬಾಬು ಅವರ ಮನೆ ದರೋಡೆ ನಡೆದಿದ್ದ ಅದೇ ಏರಿಯಾದಲ್ಲಿ ಆರೋಪಿಗಳು ಕಾಣಿಸಿಕೊಂಡ ಕ್ಷಣದಲ್ಲೇ ಕಾದಿದ್ದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಭಾವುಕ | ರಾಜ್ಯದ ಪರ ಧ್ವನಿ ಎತ್ತಿದ ದೇವೇಗೌಡ



















